ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸೇರಿದಂತೆ ಎಂಈಎಸ್ ನಗರ ಸೇವಕರು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಪುಂಡಾಟಿಕೆ ಪ್ರದರ್ಶಿಸಿದ್ದು ರಾಜ್ಯ ಸರ್ಕಾರ ಕೂಡಲೇ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಿ ಕರವೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟೆಂಟ್ ಹಾಕಿದೆ
ಪಾಲಿಕೆಯನ್ನು ಸೂಪರ್ ಸೀಎ್ ಮಾಡಬೇಕು ಶಾಸಕ ಸಂಬಾಜಿ ಪಾಟೀಲ ಹಾಗು ಅರವಿಂದ ಪಾಟೀಲರ ಸದಸ್ಯತ್ವ ರದ್ದು ಮಾಡಬೇಕು ಎಂದು ಕರವೇ ಒತ್ತಾಯಿಸಿದೆ
ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಕರವೇ ಸರ್ಕಾರದ ವಿರುದ್ಧವೇ ಸಮರ ಸಾರಲಿದೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವದರ ಜೊತೆಗೆ ಮಾರಾಷ್ಟ್ರ ಏಕೀಕರಣ ಸಮೀತಿಯನ್ನು ನಿಷೇಧಿಸಬೇಕು ಎಂದು ಕರವೇ ಅಧ್ಯಕ್ಷ ಮಹಾದೇವ ತಳವಾರ ಒತ್ತಾಯಿಸಿದ್ದಾರೆ
ಗಣೇಶ ರೋಕಡೆ ಸರೇಶ ಗವಣ್ಣವರ,ಶಾಂತಾ ಉಪಗಪಾರ ಕಸ್ತೂರಿ ಬಾವಿ ಸೇರಿದಂತೆ ನೂರಾರು ಜನ ಕರವೇ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿದಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ