ಬೆಳಗಾವಿ- ಬೆಳಗಾವಿಯ ಶೆಟ್ಟಿಗಲ್ಲಿಯ ಮನೆಯಲ್ಲಿ ಆನೆ ಸಾರಂಗು ಚಿಗರೆಯ ಕೋಡುಗಳನ್ನು ಆನೆ ದಂತಗಳನ್ನು ಬಚ್ಚಿಟ್ಟು ಆ ಮನೆಯ ಸಮೀಪ ಯಾರೊಬ್ಬರು ಸುಳಿಯದಂತೆ ಇದು ದೆವ್ವಿನ ಮನೆ ಎಂದು ಗಲ್ಲಿಯ ಜನರಲ್ಲಿ ಭಯ ಹುಟ್ಟಿಸಿದ್ದ ಕೋತ್ವಾಲ ಗಲ್ಲಿಯ ಸಲೀಂ ಚಮಡೆವಾಲೆಯ ಕರಾಮತ್ತು ಈಗ ಬಯಲಿಗೆ ಬಂದಿದೆ
ಶೆಟ್ಟಿಗಲ್ಲಿಯ ಈ ಭೂತದ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕೋಡುಗಳನ್ನು ಬಚ್ಚಿಟ್ಟು ಇವುಗಳನ್ನು ಚೀನಾ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಸಲೀಂ ಚಮಡಿವಾಲೆ ರಫ್ತು ಮಾಡುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ
ಶೆಟ್ಟಿಗಲ್ಲಿಯ ಈ ದೆವ್ವಿನ ಮನೆಯಲ್ಲಿ ಲೈಟಿಲ್ಲ ಕತ್ತಲು ಆವರಿಸಿರುವ ಮನೆಗೆ ನುಗ್ಗಿದ ಪೋಲಿಸರು ಮನೆಯಲ್ಲಿ ಇಡಲಾಗಿದ್ದ ಕೋಣೆ ತುಂಬೆಲ್ಲ ಹರಡಿಕೊಂಡಿದ್ದ ಕಾಡು ಪ್ರಾಣಿಗಳ ಅಂಗಾಂಗಳನ್ನು ನೋಡಿ ಪೋಲಿಸರು ದಂಗಾದರು
ಕೋಡುಗಳ ಜೊತೆಗೆ ಆನೆಗಳ ದಂತಗಳು ಹಾಗು ಹುಲಿಗಳ ಉಗುರುಗಳು ಪೆಂಗ್ವಿನ್ ಚಿಪ್ ಗಳು ಪತ್ತೆಯಾಗಿವೆ ಬೆಳಗಾವಿ ನಗರದ ಕೋತ್ವಾಲ ಗಲ್ಲಿಯ ನಿವಾಸಿಯಾಗಿರುವ ಈತ ಶೆಟ್ಟಿಗಲ್ಲಿಯಲ್ಲಿ ಕಳ್ಳ ದಂಧೆಯನ್ನು ನಡೆಸುತ್ತಿದ್ದ ಇಂಡಿಕಾ ಕಾರಿನಲ್ಲಿ ಕಾಡು ಪ್ರಾಣಿಗಳ ಕೋಡುಗಳನ್ನು ಕಾಡಿನಿಂದ ತರುವದು ಇದೇ ಕಾರಿನಲ್ಲಿ ಇವುಗಳನ್ನು ಮುಂಬೈ ಮೂಲಕ ಚೀನಾ ದೇಶಕ್ಕೆ ರಫ್ತು ಮಾಡುವ ದಂಧೆಯನ್ನು ಹಲವಾರು ವರ್ಷಗಳಿಂದ ನಡೆಸುತ್ತ ಬಂದಿದ್ದ
ಟ್ರಾಫಿಕ್ ಸಿಪಿಐ ಜಾವೇದ ಮುಶಾಪೂರಿ ಅವರು ನೀಡಿದ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿದ ಸಿಸಿಐಬಿ ಪೋಲಿಸರು ಕಳ್ಳ ದಂಧೆಯ ಜಾಲವನ್ನು ಪತ್ತೆ ಮಾಡಿದ್ದಾರೆ
ಪೋಲಿಸರು ವಶಪಡಿಸಿಕೊಂಡಿರುವ ಕಾಡು ಪ್ರಾಣಿಗಳ ಕೋಡುಗಳ ಬೆಲೆ ಕೋಟ್ಯಾಂತರ ರೂಪಾಯಿ ಎಂದು ಪೋಲಿಸರು ಅಂದಾಜಿಸಿದ್ದಾರೆ ಶೆಟ್ಟಿಗಲ್ಲಿಯ ೀ ದೆವ್ವಿನ ಮನೆಯಲ್ಲಿ ಸಲೀಂ ರಾತ್ರಿ ಹೊತ್ತು ಮಾತ್ರ ಚಟುವಟಿಕೆ ಮಡೆಸುತ್ತಿದ್ದ ಮಂಗಳವಾರ ಮಧ್ಯಾಹ್ನ ಪೋಲೀಸರು ದೆವ್ವಿನ ಮನೆಗೆ ಲಗ್ಗೆ ಇಟ್ಟಾಗ ಜನ ಇದು ದೆವ್ವಿನ ಮನೆ ಒಳಗೆ ಹೋಗಬೇಡಿ ಎಂದು ಪೋಲಿಸರಿಗೆ ಮನವಿಮಾಡಿಕೊಂಡರು ಎಂದು ಹೇಳಲಾಗಿದೆ
ಎಸಿಪಿ ಶಂಕರ ಮಾರಿಹಾಳ ಸೇರಿದಂತೆ ಸಿಸಿಐಬಿ ಪೋಲಿಸರು ಮನೆಯಲ್ಲಿದ್ದ ಎಲ್ಲ ಕೋಡುಗಳನ್ನು ರಿಕ್ಷಾ ಮೂಲಕ ಅರಣ್ಯ ಇಲಾಖೆಗೆ ಸಾಗಿಸಿ ಆರೋಪಿ ಸಲೀಂ ಚಮಡೆವಾಲೆಯನ್ನು ಬಂಧಿಸಿದರು