ಬೆಳಗಾವಿ – ಅಂತೂ ಇಂತೂ ಬೆಳಗಾವಿ ಕೇಂದ್ರ ಬಸ್ ನಿಲ್ಧಾಣಕ್ಕೆ ಅಭಿವೃದ್ಧಿಯ ಭಾಗ್ಯ ಒದಗಿ ಬಂದಿದೆ ಕೊಲ್ಲಾಪೂರ ಬಸ್ ಸ್ಟ್ಯಾಂಡ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ಈ ನಿಲ್ಧಾಣದಲ್ಲಿರುವ ಎಲ್ಲ ಅಂಗಡಿಗಳನ್ನು ಜೊತೆಗೆ ಹೊಟೇಲ್ ಕ್ಯಾಂಟೀನ್ ಸಹ ಖಾಲಿ ಮಾಡಿಸಲಾಗಿದ್ದ ಶನಿವಾರ ಬೆಳಿಗ್ಗೆ ನಿಲ್ಧಾಣದ ಹಳೇಯ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ
ಈಗ ಸದ್ಯಕ್ಕೆ ಹಳೆಯ ಬಸ್ ನಿಲ್ಧಾಣ ಖಾಲಿಯಾಗಿದ್ದು ಶನಿವಾರ ಕಟ್ಟಡ ನೆಲಸಮ ಮಾಡುವ ಮೊದಲು ನಿಲ್ದಾಣದ ಕಾರ್ಯ ಚಟುವಟಿಕೆಗಳು ಪಕ್ಕದಲ್ಲಿರುವ ಹೊಸ ನಿಲ್ಧಾಣದಲ್ಲಿ ನಡೆಯಲಿವೆ ಶನಿವಾರದಿಂದ ಹಳೇಯ ನಿಲ್ದಾಣದಲ್ಲಿ ಕಾಮಗಾರಿ ಆರಂಭವಾಗಲಿದೆ
ಒಂದು ವರ್ಷದಲ್ಲಿ ಬೆಳಗಾವಿಯಲ್ಲಿ ಹೈಟೇಕ್ ಬಸ್ ನಿಲ್ಧಾಣವನ್ನು ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ
ಹಲವಾರು ದಶಕಗಳ ಇತಿಹಾಸ ಹೊಂದಿರುವ ಹಳೇಯ ಬಸ್ ನಿಲ್ಧಾಣ ಶನಿವಾರ ಕಣ್ಮರೆಯಾಗಲಿದ್ದು ಹೊಸ ಬಸ್ ನಿಲ್ಧಾಣ ನಿರ್ಮಾಣ ಆಗೋವರೆಗೆ ಕೇಂದ್ರ ಬಸ್ ನಿಲ್ದಾಣ ನಗರ ಬಸ್ ನಿಲ್ಧಾಣದಲ್ಲಿ ಮರ್ಜ ಆಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ