ಬೆಳಗಾವಿ- ಉತ್ತರ ಕರ್ನಾಟಕದ ಹೆಬ್ಬಾಗಿಲು ಗಡಿನಾಡ ಗುಡಿ ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿ ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಸ್ಮಾರ್ಟ್ ಬಸ್ ನಿಲ್ಧಾಣದ ಕಾಮಗಾರಿ ಭರದಿಂದ ಸಾಗಿದೆ
ಡಿಸೆಂಬರ 3 – 2016 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರು
32 ಕೋಟಿ 48 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರ್ಟ್ ಬಸ್ ನಿಲ್ಧಾಣದ ಕಾಮಗಾರಿ ಭರದಿಂದ ನಡೆದಿದ್ದು ನಿಲ್ಧಾಣದ ಅಡಿಪಾಯ ರೆಡಿಯಾಗಿದೆ
ಕಾಮಗಾರಿಯ ಗುತ್ತಿಗೆ ಪಡೆದಿರುವ ಹರ್ಷ ಕನ್ಸಟ್ರಕ್ಷನ್ ಪ್ರೈ ಲಿಮಿಟೆಡ್ ನವರು 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ ಕಾಮಗಾರಿ ಯನ್ನು ಮುಂದುವರೆಸಿದೆ ಕಾಮಗಾರಿ ಆರಂಭವಾಗಿ ನಾಲ್ಕು ತಿಂಗಳು ಗತಿಸಿದ್ದು ಇನ್ನೂ 20 ತಿಂಗಳು ಬಾಕಿ ಇದೆ
ಸ್ಮಾರ್ಟ್ ಬಸ್ ನಿಲ್ಧಾಣದಲ್ಲಿ ವಿಶಾಲವಾದ ಬಸ್ ಟರ್ಮಿನಲ್ಲ್ ಅಟೋ ರಿಕ್ಷಾ ಲೈನ್ ಪಾರ್ಕಿಂಗ್ ಸೇರಿದಂತೆ ಪ್ರಯಾನಿಕರಿಗೆ ಸುಖಾನುಭವ ನೀಡುವ ಎಲ್ಲ ಹೈಟೆಕ್ ಸೌಲಭ್ಯಗಳು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಸಿಗಲಿವೆ
ಸ್ಮಾರ್ಟ್ ಸಿಟಿ ಯೂಜನೆಯಿಂದ 30 ಕೋಟಿ
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ನಗರದ ಅಭಿವೃದ್ಧಿಗೆ ಈಗಾಗಲೇ 400 ಕೋಟಿ ರೂ ಅನುದಾನ ಬಿಡುಗಡೆ ಆಗಿದೆ ಈ ಯೋಜನೆಯ ಅನುದಾನದಲ್ಲಿ ಬಸ್ ನಿಲ್ಧಾಣವನ್ನು ಮತ್ತಷ್ಟು ಹೈಟೆಕ್ ಹಾಗು ಡಿಜಿಟಲೀಕರಣಗೊಳಿಸಲು ಪಾಲಿಕೆ 30 ಕೋಟಿ ರೂ ಅನುದಾನ ತೆಗೆದಿರಿಸಿದೆ