Breaking News

ಸೋಮವಾರ ರಮಜಾನ್ ಈದುಲ್ ಫಿತರ್ ಹಬ್ಬ

 

ಬೆಳಗಾವಿ- ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಸೋಮವಾರ ಪವಿತ್ರ ರಮಜಾನ್ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಚ ರಾಜು ಸೇಠ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಮುಸ್ಲೀಂ ಸಮಾಜದ ಮೌಲ್ವಿಗಳು ಮತ್ತು ಮುಖಂಡರು ಭಾಗವಹಿಸಿದ್ದರು
ಚಾಂದ ಕಮೀಟಿಯ ಸದಸ್ಯರು ಚಂದ್ರ ದರ್ಶನದ ಬಗ್ಗೆ ದೆಹಲಿ.ಬೆಂಗಳೂರು ಮುಂಬಯಿ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಚಾಂದ ಕಮೀಟಿಯ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಂದ್ರ ದರ್ಶನದ ಬಗ್ಗೆ ಮಾಹಿತಿ ಪಡೆದುಕೊಂಡರು
ದೇಶದ ವಿವಿಧ ಭಾಗಗಳಲ್ಲಿ ಚಂದ್ರ ದರ್ಶನವಾದ ಬಗ್ಗೆ ಖಾತ್ರಿಪಡಿಸಿಕೊಂಡ ಬಳಿಕ ಸೋಮವಾರ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು

ಚಾಂದ ಕಮೀಟಿಯ ಸಭೆ ಮುಗಿದ ಬಳಿಕ ರಾಜು ಸೇಠ ಮಾತನಾಡಿ ಸೋಮವಾರ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಗಿದೆ ಸೋಮವಾರ ಬೆಳಿಗ್ಗೆ 9- 30 ಘಂಟೆಗೆ ಅಂಜುಮನ್ ಹಾಲ್ ಹಿಂಬದಿಯಲ್ಲಿರುವ ಈದಗಾ ಮೈದಾನದಲ್ಲಿ ಹಬ್ಬದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ತಿಳಿಸಿದರು

ಸಭೆಯಲ್ಲಿ ಮುಫ್ತಿ ಅಬ್ದುಲ್ ಅಜೀಜ್,ಮುಫ್ತಿ ಮಂಜೂರ್ ಆಲಂ ,ಹಾಫಿಜ್ ಬಶೀರ,ಕಟಗೇರಿ ಹಜರತ ಸಮಿವುಲ್ಲಾ ಮಾಡಿವಾಲೆ ಸೇರಿದಂತೆ ಹಲವಾರು ಜನ ಮುಖಂಡರು ಭಾಗವಹಿಸಿದ್ದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *