ಬೆಳಗಾವಿ- ಬೆಳಗಾವಿ ನಗರದ ಚವಾಟ ಗಲ್ಲಿಯ ರಾಜ ರಸ್ತೆಯಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವದನ್ನು ಖಂಡಿಸಿ ಚವಾಟ ಗಲ್ಲಿಯ ಮಹಿಳೆಯರು ಕೈಯಲ್ಲಿ ಕಲುಷಿತ ನೀರು ತುಂಬಿದ ಬಾಟಲ್ ಹಿಡಿದು ಆಕ್ರೋಶ ವ್ಯೆಕ್ತಪಡಿಸಿದರು
ಚವಾಟ ಗಲ್ಲಿಯ ಕರ್ತವ್ಯ ಮಹಿಳಾ ಮಂಡಳದ ಸದಸ್ಯರು ಕಳೆದ ಒಂದು ತಿಂಗಳಿನಿಂದ ಚವಾಟ ಗಲ್ಲಿಯ ನಲ್ಲಿ ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯೆಕ್ತ ಪಡಿಸಿದರು
ವಾರದಲ್ಲಿ ಒಂದೆರಡು ಬಾರಿ ನೀರು ಬರುತ್ತದೆ ಅದು ಕೂಡಾ ಕಲುಷಿತ ವಾಗಿರುವದರಿಂದ ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಜರುಗಿಸುವಂತೆ ಮಹಿಳೆಯರು ಮನವಿ ಅರ್ಪಿಸಿದರು
ಅಕ್ಕಾತಾಯಿ ಸುತಾರ ಮಿಲನ ಪವಾರ ಮಥುರಾ ಖುಟ್ರೆ ಸುನಂದಾ ಪವಾರ್ ಮಾಧುರಿ ಧಾಮಣೆಕರ ಕಿಶನ ರೇಡೆಕರ್ ಅರುಣ ಪವಾರ ಭಾವು ನಾಯಕ ಉಪಸ್ಥಿತರಿದ್ದರು