Breaking News

ಮೋದಿ ಬೆಂಬಲಿಸಿ ವ್ಯಾಪಾರಿಗಳಿಗೆ ಬಿಜೆಪಿಯಿಂದ ಲಾಡು ಹಂಚಿಕೆ

ಬೆಳಗಾವಿ-ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ರದ್ದು ಮಾಡಿರುವ ಕ್ರಮವನ್ನು ಬೆಂಬಲಿಸಿ ವಿಪಕ್ಷಗಳ ಕರೆಯಲ್ಲಿ ಭಾಗವಹಿಸದೇ ವ್ಯಾಪಾರ ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ಗೂಲಾಬಿ ನೀಡಿ ಲಾಡು ಹಂಚಿ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಸಂಬ್ರಮಿಸಿದರು

ಬೆಳಗಾವಿ ನಗರದ ಹುತಾತ್ಮ ವೃತ್ತದಲ್ಲಿ ಸೇರುದ ಬಿಜೆಪಿ ಕಾರ್ಯಕರ್ತರು ಕಿರ್ಲೋಸ್ಕರ  ರಸ್ತೆ ಸೇರಿದಂತೆ ನಗರದ ವ್ಯಾಪಾರಿಗಳಿಗೆ ಲಾಡು ಹಂಚಿ ಗುಲಾಬಿ ಹಂಚಿ ವ್ಯಾಪಾರಿಗಳಿಗೆ ಕೃತದ್ಞತೆ ಸಲ್ಲಿಸಿದರು

ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲ ಬೆನಕೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ರದ್ದು ಮಾಡಿರುವ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಪ್ರತಿಪಕ್ಷಗಳು ತಮ್ಮ ಕಪ್ಪು ಹಣವನ್ನು ರಕ್ಷಿಸಲು ಭಾರತ ಬಂದ್ ಗೆ ಕರೆ ನೀಡಿದ್ದರು ಆದರೆ ಬೆಳಗಾವಿಯ ಜನ ಅದರಲ್ಲಿ ಭಾಗವಹಿಸದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು

ಬಿಜೆಪಿ ಯುವ ಮುಖಂಡ ರಾಜು ಜಿಕ್ಕನಗೌಡರ ಮಾತನಾಡಿ ಮೋದಿ ಅವರ ದಿಟ್ಟ ಕ್ರಮದಿಂದ ಲೂಟಿಕೋರರ ನಿದ್ದೆಗೆಟ್ಟಿದೆ ಭಾರತ ಬಂದ್ ಕರೆ ಸಂಪೂರ್ಣವಾಗಿ ವಿಫಲವಾಗಿದ್ದು ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ ಎಂದರು

ಉಜ್ವಲಾ ಬಡವನ್ನಾಚೆ, ಜಯಶ್ರೀ ಪಾಟೀಲ ಸಂಜಯ ಜಿನಗೌಡ ಬಾಬುಲಾಲ ರಾಜಪುರೋಹಿತ ಲೀಣಾ ಟೋಪಣ್ಣವರ, ಗಿರೀಶ ಧೋಂಗಡಿ, ಸಂಗಯ್ಯ ಹಿರೇಮಠ, ಸಂಜಯ ಭಂಡಾರಿ, ರಾಹುಲ ಮುಚ್ಚಂಡಿ,ವಿಜಯ ಕೊಡಗನೂರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *