ಬೆಳಗಾವಿ- ಬೆಳಗಾವಿ ನಗರದ ಅತ್ಯಂತ ಹಳೆಯದಾದ,ಹೃದಯಭಾಗದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ನೆಲಸಮ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ನಿರ್ಧರಿಸಿದೆ.
ಹಲವಾರು ದಶಕಗಳಿಂದ ಈ ಕಾಂಪ್ಲೆಕ್ಸ್ ನಲ್ಲಿ ವಹಿವಾಟು ನಡೆಸುತ್ತಿದ್ದ ಅಂಗಡಿಕಾರರಿಗೆ ಬೆಳಗಾವಿ ಮಹಾನಗರ ಪಾಲಿಕೆ ಹೊರಡಿಸಿರುವ ನೋಟೀಸ್ ನಿದ್ದೆಗೆಡಿಸಿದೆ. ಹದಿನೈದು ದಿನದಲ್ಲಿ ಅಂಗಡಿಗಳನ್ನು ಖಾಲಿ ಮಾಡಿ,ಕಾಂಪ್ಲೆಕ್ಸ್ ಖುಲ್ಲಾ ಮಾಡುವಂತೆ ನೋಟೀಸ್ ಮೂಲಕ ಸೂಚಿಸಲಾಗಿದೆ.
ಬೆಳಗಾವಿ ಮಹಾನಗರದ ಬಸವೇಶ್ವರ ವೃತ್ತ್ ( ಗೋವಾವೇಸ್ ) ನಲ್ಲಿರುವ ಮಹಾನಗರ ಪಾಲಿಕೆಯ ಈ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಡ, ಅಪಾಯದ ಅಂಚಿನಲ್ಲಿದೆ ಎಂದು ತಜ್ಞರು ವರದಿ ನೀಡಿರುವ ಹಿನ್ನಲೆಯಲ್ಲಿ ಪಾಲಿಕೆ ಈ ಕಾಂಪ್ಲೆಕ್ಸ್ ನೆಲಸಮ ಮಾಡಲು ನಿರ್ಧರಿಸಿ ಅಂಗಡಿಕಾರರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಅಪಾಯದ ಅಂಚಿನಲ್ಲಿರುವ ಹಲವಾರು ಕಟ್ಟಡಗಳನ್ನು ನೆಲಸಮ ಮಾಡಿರುವ ಬೆಳಗಾವಿ ಮಹಾನಗರ ಪಾಲಿಕೆ ಈಗ ಬಸವೇಶ್ವರ ವೃತ್ತದಲ್ಲಿರುವ ವಾಣಿಜ್ಯ ಸಂಕೀರ್ಣವನ್ನು ನೆಲಸಮ ಮಾಡಲು ಮುಂದಾಗಿದ್ದು ಇಲ್ಲಿಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ.