ಬೆಳಗಾವಿ- ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರ ನೋಟೀಸ್ ಜಾರಿ ಮಾಡಿದ ನಂತರವೂ ಬೆಳಗಾವಿ ಮೇಯರ್ ಸರೀತಾ ಪಾಟೀಲ ಹಾಗು ಎಂಈಎಸ್ ನಾಯಕರು ಮುಂಬೈ ಮೇಯರ್ ಭೇಟಿಯಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಒತ್ತಾಯಿಸಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದರೂ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿಯಾಗಿದೆ
ಬೆಳಗಾವಿಯ ಕೆಲವು ನಾಯಕರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಮೇಯರ್ ಉಪ ಮೇಯರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಇನ್ನು ಕೆಲವು ನಾಯಕರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಿಸಲು ಪ್ರಯತ್ನ ನಡೆಸಿದ್ದಾರೆ
ಇನ್ನೊಂದು ಕಡೆ ಪಾಲಿಕೆಯ ಕನ್ನಡ,ಊರ್ದು,ಹಾಗು ಕೆಲ ಮರಾಠಿ ಭಾಷಿಕ ನಗರ ಸೇವಕರು ಮುಖ್ಯಮಂತ್ರಿಗಳನ್ನು ಹಾಗು ಬಹುತೇಕ ಎಲ್ಲ ಸಚಿವರನ್ನು ಭೇಟಿಯಾಗಿ ಪಾಲಿಕೆ ಸೂಪರ್ ಸೀಡ್ ಮಾಡದಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ
ಸೂಪರ್ ಸೀಡ್ ವಿಷಯದಲ್ಲಿ ಕನ್ನಡ ವಲಯದಲ್ಲಿಯೇ ಭಿನ್ನಾಭಿಪ್ರಾಯ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ ಪಾಲಿಕೆ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದೆ
ಕೇವಲ ಮೇಯರ್ ಹಾಗು ಉಪ ಮೇಯರ್ ವಿರುದ್ಧ ಕ್ರಮ ಕೈಗೊಳ್ಳಲು ಕೆಲವು ಕಾನೂನಾತ್ಮಕ ತೊಡಕುಗಳಿದ್ದು ಸರ್ಕಾರದ ಮುಂದೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವದೊಂದೇ ದಾರಿ ಉಳಿದಿದೆ
ಈ ವಿಷಯದಲ್ಲಿ ಗಡಿ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ ಉಸಾಬರಿ ಮಾಡುತ್ತಿಲ್ಲ ಅವರು ಜಾನ ಮೌನ ಅನೇಕ ಅನುಮಾನಗಳಿಗೆ ಕಾರಣವಾಗಿದೆ
ಸೂಪರ್ ಸೀಡ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಎಂಈಎಸ್ ಅನೇಕ ತಂತ್ರಗಳನ್ನು ಅನುಸರಿಸುತ್ತಿದೆ ಎಂಈಎಸ್ ನ ಹದಿನಾಲ್ಕು ಜನ ನಗರ ಸೇವಕರು ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡದಿದ್ದರೆ ನಾವು ಕನ್ನಡ ಗುಂಪಿಗೆ ಬೆಂಬಲ ಕೊಡಲು ಸಿದ್ಧ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಎದುರು ಪರೇಡ್ ಮಾಡಿದ್ದು ಒಟ್ಟಾರೆ ಪಾಲಿಕೆಯ ಸೂಪರ್ ಸೀಡ್ ಸುತ್ತ ಅನುಮಾನದ ಹುತ್ತ ಬೆಳೆದು ಕೊಂಡಿದ್ದು ನಾಡು ನುಡಿಯ ವಿಷಯದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ