ಬೆಳಗಾವಿ- ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಸೂಪರ್ ಸೀಡ್ ಶಿಕ್ಷೆಯಿಂದ ಬಚಾವ್ ಆಗಿರುವ ಮೇಯರ್ ಸರೀತಾ ಪಾಟೀಲ ಈಗ ಮತ್ತೊಂದು ಡೇಂಜರ್ ಹೆಜ್ಜೆಯಿಡಲು ಸಂಚು ರೂಪಿಸಿದ್ದಾರೆ
ಫೆ 6 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಸಭೆ ನಡೆಯಲಿದೆ ಈ ಸಭೆಯಲ್ಲಿ ಬಜೆಟ್ ಮಂಡನೆಯ ಮೊದಲು ಅಥವಾ ಬಜೆಟ್ ಮಂಡನೆ ಯಾದ ಬಳಿಕ ಮೇಯರ್ ಸರೀತಾ ಪಾಟೀಲ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ನಿರ್ಣಯ ಮಂಡಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿರುವದಾಗಿ ನಂಬಲರ್ಹ ಮೂಲಗಳು ದೃಡಪಡಿಸಿವೆ
ಮೇಯರ್ ಸರೀತಾ ಪಾಟೀಲ ಅವರ ಅಧಿಕಾರದ ಅವಧಿ ಕೇವಲ ಒಂದು ತಿಂಗಳು ಬಾಕಿ ಇದೆ ಫೆ 6 ರಂದು ನಡೆಯಲಿರುವ ಪಾಲಿಕೆಯ ಬಜೆಟ್ ಸಭೆ ಮೇಯರ್ ಸರೀತಾ ಪಾಟೀಲರ ಅಧ್ಯಕ್ಷತೆಯಲ್ಲಿ ನಡೆಯುವ ಕೊನೆಯ ಸಭೆ ಇದಾಗಿದ್ದು ಈ ಸಭೆಯಲ್ಲಿ ಮೇಯರ್ ಸರೀತಾ ಭಾಷಾ ವಿವಾದದ ಬಾಂಬ್ ಸಿಡಿಸಿ ಗದ್ದಲ ಮಾಡುವ ತಂತ್ರವನ್ನು ಹಣೆದಿದ್ದಾರೆ
ಈ ವಿಷಯ ಪಾಲಿಕೆಯ ಅಧಿಕಾರಿಗಳಿಗೂ ಗೊತ್ತಾಗಿದೆ ಹೀಗಾಗಿ ಫೆ 3 ,ರಂದು ನಡೆಯಬೇಕಾಗಿದ್ದ ಬಜೆಟ್ ಸಭೆಯನ್ನು ಫೆ 6 ಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ ಆರ ರಂದು ನಡೆಯುವ ಸಭೆಯನ್ನು ಸ್ಪೇಶಲ್ ಬಜೆಟ್ ಮಿಟೀಂಗ್ ಎಂದು ನಿಗದಿ ಮಾಡಿದರೂ ಸಹ ಈ ಸಭೆಯಲ್ಲಿ ಮೇಯರ್ ಸರೀತಾ ಪುಂಡಾಟಿಕೆ ಪ್ರದರ್ಶಿಸುವ ವಿಷಯವನ್ನು ತಳ್ಳಿ ಹಾಕುವಂತಿಲ್ಲ
ಮೇಯರ್ ಆಗಿರುವ ಸರೀತಾ ಪಾಟೀಲ ಎಂಎಲ್ಎ ಆಗುವ ಕಣಸು ಕಂಡಿದ್ದಾರೆ ಬೆಳಗಾವಿ ಉತ್ತರದಿಂದ ಎಂಈಎಸ್ ಅಭ್ಯರ್ಥಿಯಾಗಲು ಪ್ರಭಾವ ಬೀರಲು ಪಾಲಿಕೆಯಲ್ಲಿ ಗಡಿವಿವಾದವನ್ನು ಕೆಣಕಿ ಸಮಝೋತಾ ಎಕ್ಸಪ್ರೆಸ್ಸಿನ ಸಮಾಧಿ ಮಾಡಲು ನಿಶ್ಚಯಿದಿದ್ದಾರೆ
ರಾಜ್ಯ ಸರ್ಕಾರ ಮೇಯರ್ ಸರೀತಾ ಪಾಟೀಲ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇದರಿಂದ ಚೇತರಿಸಿಕೊಂಡಿರುವ ಅವರು ಮೇಯರ್ ಹುದ್ದೆಯಿಂದ ಹೋಗುವಾಗ ಕಿತಾಪತಿ ಮಾಡಲು ನಿರ್ಧರಿಸಿದ್ದು ರಾಜ್ಯ ಸರ್ಕಾರ ಈ ಕುರಿತು ಮುನ್ನೆಚರಿಕೆಯ ಕ್ರಮಗಳನ್ನು ಜರುಗಿಸಬೇಕಾಗಿದೆ
ಕಳೆದ ನಾಲ್ಕು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭಾಷಾ ವಿವಾದವನ್ನು ಬದಿಗಿಟ್ಟು ಅಭಿವೃದ್ಧಿ ವೇದಿಕೆ ನಿರ್ಮಿಸಿ ಸಮಝೋತಾ ಎಕ್ಸಪ್ರೆಸ್ ನ ಸುಖಕರ ಪ್ರಯಾಣ ಮುಂದುವರೆದಿತ್ತು ಆದರೆ ಸರೀತಾ ಪಾಟೀಲ ಸ್ವಾರ್ಥ ರಾಜಕೀಯ ಲಾಭಕ್ಕೆ ವಿವಾದ ಕೆಣಕಿ ಸರ್ಕಾರಕ್ಕೆ ಸವಾಲ್ ಹಾಕಲು ರೆಡಿಯಾಗಿದ್ದಾರೆ