ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸಂಜೋತಾ ಬಾಂಧೇಕರ ತಮ್ಮ ಅಧಿಕಾರ ಚಲಾಯಿಸುವ ಮೂಲಕ ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕವನ್ನು ಫಿಕ್ಸ ಮಾಡಿದ್ದರು ಆದರೆ ಮೇಯರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಪ ಮಹಾಪೌರ ನಾಗೇಶ ಮಂಡೋಲ್ಕರ್ ಮತ್ತು ವಿರೋಧ ಪಕ್ಷದ ನಾಯಕ ರವಿ ಧೋತ್ರೆ ವಿರೋಧ ವ್ಯೆಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ
ಮೇಯರ್ ಸಂಜೋತಾ ಬಾಂಧೇಕರ್ ಎಪ್ರಿಲ್ 4 ರಂದು ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕ ಫಿಕ್ಸ ಮಾಡಿದ್ದರು ಆದರೆ ಉಪ ಮೇಯರ್ ಮತ್ತು ಇತರರು ಎಲ್ಲ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡೇಟ್ ಫಿಕ್ಸ ಮಾಡಬೇಕೆಂದು ಪಟ್ಟು ಹಿಡಿದಿರುವದರಿಂದ ಎಪ್ರಿಲ್ ನಾಲ್ಕರಂದು ನಡೆಯಬೇಕಾಗಿದ್ದ ಪಾಲಿಕೆಯ ಸಾಮಾನ್ಯ ಸಭೆಗೆ ಗ್ರಹಣ ಹಿಡಿದಂತಾಗಿದೆ
ಮಹಾಪೌರರ ಚುನಾವಣೆ ನಡೆದ ಬಳಿಕ ಪಾಲಿಕೆಯಲ್ಲಿ ಗುಂಪುಗಾರಿಕೆ ಮನೆ ಮಾಡಿದೆ ಮಹಾಪೌರ ಸಂಜೋತಾ ಬಾಂಧೇಕರ ಮತ್ತು ಉಪ ಮಹಾಪೌರ ನಾಗೇಶ ಮಂಡೋಳ್ಕರ್ ನಡುವೆ ಒಮ್ಮತ ಮೂಡುತ್ತಿಲ್ಲ ಹೀಗಾಗಿ ಮೇಯರ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಪಾಲಿಕೆಯಲ್ಲಿ ವಿರೋಧ ವ್ಯೆಕ್ತವಾಗುತ್ತಿದೆ
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ನೀರು ಸರಬರಾಜು ಮಾಡಲಾಗುತ್ತಿದೆ ಉತ್ತರ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ ನೀರು ಹಂಚಿಕೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಅಭಯ ಪಾಟೀಲ ಆರೋಪಿಸಿ ನೀರು ಸರಬರಾಜು ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ತ್ವರಿತವಾಗಿ ಪಾಲಿಕೆಯ ಸಾಮಾನ್ಯ ಸಭೆ ನಡೆಯಬೇಕಾಗಿದೆ ಸಭೆಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಖಬೇಕಾಗಿದೆ ಆದರೆ ಪಾಲಿಕೆಯಲ್ಲಿ ಸಭೆಯ ಡೇಟ್ ಫಿಕ್ಸ ಮಾಡಲು ಕಿತ್ತಾಟ ನಡೆದರೆ ಇನ್ನೊಂದು ಕಡೆ ನೀರಾಗಾಗಿ ನಗರ ನಿವಾಸಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ