Breaking News

ಬೆಳಗಾವಿ ಮಹಾನಗರ ಪಾಲಿಕೆ ಸಾಲ ವಿಲ್ಲದ ಸರ್ದಾರ….!

ಬೆಳಗಾವಿ- ಭಾಷಾ ಸಂಘರ್ಷ ನಾಡ ವಿರೋಧಿಗಳ ದುರಾಡಳಿತದ ನಡುವೆಯೂ ಬೆಳಗಾವಿ ಮಹಾನಗರ ಪಾಲಿಕೆಯ ಕೆಲವು ಹಿರಿಯ ಅಧಿಕಾರಿಗಳ ಚಾಣಾಕ್ಷ ನೀತಿಯಿಂದಾಗಿ ಪಾಲಿಕೆ ಕರ್ನಾಟಕ ರಾಜ್ಯದಲ್ಲಿಯೇ ಸಾಲ ರಹಿತ ಏಕೈಕ ಪಾಲಿಕೆಯಾಗಿ ಹೊರ ಹೊಮ್ಮಿದೆ

ಬೆಳಗಾವಿ ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆಗಳು ಸಾಲದ ಶೂಲದಲ್ಲಿ ಮುಳುಗಿವೆ ಆದರೆ ಬೆಳಗಾವಿ ಪಾಲಿಕೆ ಮಾತ್ರ ಸಾಲ ಮಾಡದೇ ಅಭಿವೃದ್ಧಿಯ ನಾಗಾಲೋಟದಲ್ಲಿರುವದು ಸಂತಸದ ಸಂಗತಿಯಾಗಿದೆ

ಬೆಳಗಾವಿ ಮಹಾನಗರ ಪಾಲಿಕೆ ಕೋಟ್ಯಾಂತರ ರೂ ಬೆಲೆ ಬಾಳುವ ಚಿರಾಸ್ತಿ ಹೊಂದಿದೆ ಕೆಲವು ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕುಗಳ ಮೂಲಕ ಸಾಲ ಪಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚನೆ ನೀಡಿದರೂ ಸಹಿತ ಪಾಲಿಕೆ ಅಧಿಕಾರಿಗಳ ವಿವಿಧ ಯೋಜನೆಗಳ ಉಳಿತಾಯದ ಹಣ ವಿನಿಯೋಗಿಸಿ ಸಾಲ ಮಾಡದೇ ಪಾಲಿಕೆಯನ್ನು ಸಾಲದ ಶೂಲಿಗೆ ತಳ್ಳುವ ಪ್ರಯತ್ನ ಮಾಡದೇ ಇರುವದರಿಂದ ಸಾಲ ರಹಿತ ಪಾಲಿಕೆಯಾಗಿ ರಾಜ್ಯದ ಗಮನ ಸೆಳೆಯುತ್ತಿದೆ

ಬೆಳಗಾವಿ ಪಾಲಿಕೆ ಸಾಲದ ವಿಷಯದಲ್ಲಿ ಅಷ್ಟೇ ಅಲ್ಲ ಒಳ ಚರಂಡಿ ವ್ಯೆವಸ್ಥೆ,ತೆರೆದ ಬಾವಿಗಳ ನೀರಿನ ಸಧ್ಬಳಿಕೆ ನಿರಂತರ ಕುಡಿಯುವ ನೀರಿನ ವ್ಯೆವಸ್ಥೆ ,ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವಿಷಯದಲ್ಲಿ ಬೆಳಗಾವಿ ಪಾಲಿಕೆ ಇತರ ಪಾಲಿಕೆಗಳಿಗೆ ಮಾದರಿಯಾಗಿದೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಅಭಿಯಂತರರಾಗಿ ಈಗ ಮುಖ್ಯ ಅಭಿಯಂತರ ಆಗಿರುವ ಆರ್ ಎಸ್ ನಾಯಕ ಅವರ ಪ್ರಾಮಾಣಿಕತೆ ಅಭಿವೃದ್ಧಿಯ ದೂರ ದೃಷ್ಠಿ ಮತ್ತು ಸಾಮಾಜಿಕ ಕಳಕಳಿಯ ಪರಿಣಾಮ ಬೆಳಗಾವಿ ಮಹಾನಗರ ಪಾಲಿಕೆ ಹಲವಾರು ವಿಷಯಗಳಿಗೆ ಸಮಂಧಿಸಿದಂತೆ ರಾಜ್ಯದ ಗಮನ ಸೆಳೆದು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ

ನೂರು ಕೋಟಿಯ ರೂವಾರಿ

ಬೆಳಗಾವಿ ಮಹಾನಗರ ಪಾಲಿಕೆಯ ಅನುದಾನ ನಗರದ ಅಭಿವೃದ್ಧಿಗೆ ಸಾಕಾಗುತ್ತಿಲ್ಲ ವಿಶೇಷ ಅನುದಾನ ಬಿಡುಗಡೆ ಮಾಡಿಸಲೇ ಬೇಕು ಎಂದು ಹಟಕ್ಕೆ ಬಿದ್ದ ಮಾಜಿ ಶಾಸಕ ಅಭಯ ಪಾಟೀಲ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಬಾರಿ ಪಾಲಿಕೆಯಿಂದ ನಿಯೋಗ ಕೊಂಡೊಯ್ದು ಪ್ರ ಪ್ರಥಮ ಬಾರಿಗೆ ನೂರು ಕೋಟಿ ಬಿಡುಗಡೆ ಮಾಡಿಸುವದರ ಮೂಲಕ ಅಭಯ ಪಾಟೀಲ ನಗರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರಿಂದಲೇ ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಬೆಳಗಾವಿ ಪಾಲಿಕೆಗೆ ನೂರು ಕೋಟಿ ಅನುದಾನ ಬರುತ್ತಿದೆ ಪ್ರ ಪ್ರಥಮವಾಗಿ ನೂರು ಕೋಟಿ ಬಿಡುಗಡೆ ಆಗಿದ್ದಾಗ ಪ್ರಶಾಂತಾ ಬುಡವಿ ಮೇಯರ್ ಆಗಿದ್ದರು

ಖುಲ್ಲಾ ಜಾಗೆಗಳ ಸಧ್ಬಳಕೆಯಾಗಲಿ

ಈ ಹಿಂದೆ ರವಿಕುಮಾರ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾಗ ನಗರದಲ್ಲಿರುವ ಪಾಲಿಕೆ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಲ್ಲಿ ಯಶಸ್ವಿ ಯಾಗಿದ್ದರು ಅತಿಕ್ರಮಣ ಮಾಡಿಕೊಂಡ ಲೀಜ್ ಅವಧಿ ಮುಗಿದ 300 ಕೋಟಿಗಿಂತಲೂ ಹೆಚ್ಚಿನ ಬೆಲೆಬಾಳುವ ಪಾಲಿಕೆ ಆಸ್ತಿಗಳನ್ನು ವಶಪಡಿಸಿಕೊಂಡು ರಾಜ್ಯದ ಗಮನ ಸೆಳೆದಿದ್ದರು ಆದರೆ ಈ ಎಲ್ಲ ಖುಲ್ಲಾ ಜಾಗೆಗಳನ್ನು ಪಾಲಿಕೆ ಅಧಿಕಾರಿಗಳು ಸಧ್ನಳಿಕೆ ಮಾಡಿಕೊಂಡರೆ ಬೆಳಗಾವಿ ಪಾಲಿಕೆ ಇನ್ನಷ್ಟು ಶ್ರೀಮಂತ ಆಗುವದರಲ್ಲಿ ಸಂದೇಹವೇ ಇಲ್ಲ ಮಾಳ ಮಾರುತಿ ಬಡಾವಣೆಯಲ್ಲಿರುವ ನೂರಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿ ಆದಾಯ ಹೆಚ್ಚಿಸಿಕೊಳ್ಳ ಬೇಕು ಇಲ್ಲದಿದ್ದರೆ ಈ ಎಲ್ಲ ಖಾಲಿ ನಿವೇಶನಗಳನ್ನು ರಿಯಲ್ ಇಸ್ಟೇಟ್ ಕುಳಗಳು ನುಂಗಿ ನೀರು ಕುಡಿಯುವಲ್ಲಿ ಸಂಧೇಹವೇ ಇಲ್ಲ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *