ಬೆಳಗಾವಿ- ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾದಲ್ಲಿ ಎರಡು ಮಹತ್ವದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ
ಮೂರು ಕೋಟಿ ರೂ ವೆಚ್ಚದಲ್ಲಿ ನಗರದ ಎಪಿಎಂಸಿ ರಸ್ತೆಯಲ್ಲಿರುವ ಪಾಲಿಕೆಯ ಖುಲ್ಲಾ ಜಾಗೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ ನಿರ್ಮಿಸಲಾಗುತ್ತಿದೆ
ನಗರದ ವಿವಿಧ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ಖುಲ್ಲಾ ಜಾಗೆಗಳಿವೆ ಈ ಜಾಗೆಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸಗಳನ್ನು ನಿರ್ಮಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವದು ನಗರ ಸೇವಕರ ಮತ್ತು ಪಾಲಿಕೆ ಆಯುಕ್ತರ ಸಂಕಲ್ಪವಾಗಿದೆ
ಮೂರು ಕೋಟಿ ರೂ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವದರ ಜೊತೆಗೆ ಗಣೇಶಪೂರ ರಸ್ತೆಯಲ್ಲಿರುವ ವಿನಾಯಕ ನಗರದಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ಸ್ವಿಮಿಂಗ್ ಫೂಲ್ ನಿರ್ಮಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಈ ಎರಡು ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ
ನಗರದ ಬಾಪಟ್ ಗಲ್ಲಿಯಲ್ಲಿ ಮಲ್ಟಿಲೇವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಏಕೈಕ ಗುತ್ತಿಗೆದಾರ ಟೆಂಡರ್ ಹಾಕಿದ್ದು ನೆಗೋಶೆಷನ್ ಕಾರ್ಯ ನಡೆದಿದೆ ಈ ಕಾಮಗಾರಿಯೂ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆ ಇದೆ