ಬೆಳಗಾವಿ- ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಂದ ..ಚೆಂದ ಮಾಡುವ ಪ್ರಯತ್ನಗಳು ಮುಂದುವರೆದಿವೆ
ಪಾಲಿಕೆ ಪಕ್ಕದಲ್ಲಿರುವ ಭಾರತ ರತ್ನ ಡಾ ಬಾಬಾಸಾಹೇಬ್ ಅಂಬೇಡ್ಜರ್ ಅವರ ಮೂರ್ತಿಯ ಹಿಂಬದಿಯಲ್ಲಿ ಈ ಮೂರ್ತಿ ಕಟ್ಟಡದ ಮುಂಬಾಗದಲ್ಲಿ ಬರುವ ಹಾಗೆ ಅನ್ಯೆಕ್ಷ ಬಿಲ್ಡಿಂಗ್ ನಿರ್ಮಾಣ ಮಾಡಲಾಗುತ್ತಿದೆ
ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕನೆಯ ಹಣಕಾಸಿನ ಉಳಿತಾಯದ ಹಣದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದಲ್ಲಿ ಮೇಯರ್, ಉಪ ಮೇಯರ್ ಚೇಂಬರ್ ಪಾಲಿಕೆ ಆಯುಕ್ತರ ಚೇಂಬರ್,ಜಿಲ್ಲಾ ಮಂತ್ರಿ ಸೇರಿದಂತೆ ಸ್ಥಳೀಯ ಶಾಸಕರ ಚೇಂಬರ್ ಗಳು ನಿರ್ಮಾಣವಾಗಲಿವೆ ಜೊತೆಗೆ ಈ ಆನ್ಯೆಕ್ಸ ಕಟ್ಟಡದಲ್ಲಿ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚೇಂಬರ್ ಮತ್ತು ಆಡಳಿತ ಪಕ್ಷದ ನಾಯಕ,ವಿರೋಧ ಪಕ್ಷದ ನಾಯಕರ ಕಚೇರಿಗಳು ಈ ಕಟ್ಟಡಕ್ಕೆ ಶಿಪ್ಟ ಆಗಲಿವೆ
ಪಾಲಿಕೆಯ ಆಡಳಿತದ ಹಿದೃಷ್ಠಿಯಿಂದ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಸಾರ್ವಜನಿಕರು ತಮ್ಮ ಪ್ರತಿನಿಧಿಗಳಿಗೆ ಭೇಟಿಯಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಆ್ಯನೆಕ್ಸ ಬಿಲ್ಡೀಂಗ್ ಅತ್ಯಂತ ಅನಕೂಲವಾಗಲಿದೆ ಶೀಘ್ರದಲ್ಲಿಯೇ ಈ ಕಟ್ಟಡದ ಕಾಮಗಾರಿ ಆರಂಭವಾಗಲಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ಹೈಟೆಕ್ ಆಗುವತ್ತ ದಾಪುಗಾಲು ಹಾಕುತ್ತಿದೆ