ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಫೇಬ್ರುವರಿ 3ರಂದು ಮಂಡನೆಯಾಗಲಿದೆ ಅದಕ್ಕಾಗಿ ಪಾಲಿಕೆ ಕಚೇರಿಯಲ್ಲಿ ಪೂರ್ವಸಿದ್ಧತೆಯ ಸರಣಿ ಸಭೆಗಳು ನಡೆದಿವೆ
ಬೆಳಗಾವಿ ನಗರ ಸ್ಮಾರ್ಟ ಸಿಟಿ ಯೋಜನೆಯ ಪಟ್ಟಿಯಲ್ಲಿ ಸೇರಿದ ಬಳಿಕ ಮೊದಲ ಬಜೆಟ್ ಮಂಡನೆಯಾಗುತ್ತಿದೆ ಈ ಬಾರಿಯ ಬಜೆಟ್ ನ್ನು ಸ್ಮಾರ್ಟ ಬಜೆಟ್ ವನ್ನಾಗಿಸಲು ಪಾಲಿಕೆ ಆಯುಕ್ತ ಶಶಿಧರ ಕುರೇರ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಂಡಿದ್ದಾರೆ
ಬಜೆಟ್ ಹೇಗಿರಬೇಕು ಎನ್ನುವ ಕುರಿತು ನಗರದ ಬುದ್ಧಿಜೀವಿಗಳ ಜೊತೆ,ಮಾಜಿ ಮಹಾಪೌರರ ಜೊತೆ,ಪರಿಸರವಾದಿಗಳ ಜೊತೆ ಮತ್ತು ಬಿಲ್ಡರ್ ಗಳ ಜೊತೆ ಸಮಾಲೋಚನೆ ನಡೆಸಿ ಅಭಿಪ್ರಾಯಗಳನ್ನು ಆಲಿಸಿರುವ ಶಶಿಧರ ಕುರೇರ ಸ್ಮಾರ್ಟ ಬಜೆಟ್ ತಯಾರಿ ಮಾಡಿಕೊಂಡಿದ್ದಾರೆ
ಈ ಬಾರಿಯ ಬಜೆಟ್ ನಲ್ಲಿ ಸರಕಾರದ ಆದೇಶದ ಪ್ರಕಾರ ಶೇ ೧೫ ರಷ್ಟು ಆಸ್ತಿ ತೆರಿಗೆ ಮತ್ತು ನೀರಿನ ಕರ ಹೆಚ್ಚಳವಾಗಲಿದೆ ಸ್ವಾತಂತ್ರ್ಯ ಯೋಧರಿಗೆ ತೆರಿಗೆಯಲ್ಲಿ ವಿನಾಯತಿ ನೀಡುವ ಸಾಧ್ಯತೆಗಳಿದ್ದು ಆನ್ ಲೈನ್ ಮೂಲಕ ತೆರಿಗೆ ಪಾವತಿಸುವ ಹೊಸ ಹೈಟೆಕ್ ಪದ್ದತಿಯನ್ನು ಬಜೆಟ್ ನಲ್ಲಿ ಘೋಷಣೆಯಾಗಬಹು ಎಂದು ನಿರೀಕ್ಷಿಸಲಾಗಿದೆ
ಕಟ್ಟಡ ನಿರ್ಮಾಣದ ಅನುಮತಿ ಕುರಿತು ಸಾರ್ವಜನಿಕರಿಂದ ಹಲವಾರು ರೀತಿಯ ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕಟ್ಟಡ ಪರವಾಣಿಗೆಯ ನಿಯಮಾವಳಿಗಳನ್ನು ಸರಳಗೊಳಿಸಿ ಸುಲಭವಾಗಿ ಪರವಾಣಿಗೆ ಸಿಗುವ ಹೊಸ ನೀತಿಯನ್ನು ಜಾರಿಗೆ ತರಲು ಪಾಲಿಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ನಗರದಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸುತ್ತಿರುವ ತಳ್ಳುವ ಗಾಡಿಗಳಿಗೆ ಮತ್ತು ಬೀದಿ ವ್ಯಾಪಾರಿಗಳಿಗೆ ವಿಶೇಷ ವಲಯಗಳನ್ನು ಸ್ಥಾಪಿಸಲು ಬಜೆಟ್ ನಲ್ಲಿ ವಿಶೇಷ ಅನುದಾನ ನೀಡಿ ಬೀದಿ ವ್ಯಾಪಾರಿಗಳಿಗೆ ಶಿಸ್ತಿನ ವ್ಯೆವಸ್ಥೆ ಮಾಡಿಕೊಡಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಲಾಗುತ್ತಿದೆ
ಪಾಲಿಕೆ ಒಡೆತನದ ನೂರಾರು ಖುಲ್ಲಾ ಜಾಗೆಗಳು ನಗರದ ಮಾರುಕಟ್ಟೆ ಪ್ರದೇಶದಲ್ಲಿದ್ದು ಜಾಗಗಳಲ್ಲಿ ಶಾಪಿಂಗ್ ಕಾಂಪ್ಲೆಸ್ ಗಳನ್ನು ನಿರ್ಮಿಸಿ ಪಾಲಿಕೆಯ ಆದಾಯ ಹೆಚ್ಚಿಸುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಬಹುದಾಗಿದೆ
ಒಟ್ಟಾರೆ ಈ ಬಾರಿಯ ಬಜೆಟ್ ಮತ್ತು ಬಜೆಟ್ ಕುರಿತು ಮಹಾಪೌರರು ಮಾಡುವ ಭಾಷಣ ಸ್ಮಾರ್ಟ ಆಗೋದಂತೂ ಗ್ಯಾರಂಟಿ ಟ್ಯಾಕ್ಸ ಹೆಚ್ಚಳದ ಬಿಸಿ ಜೊತೆ ನಗರ ನಿವಾಸಿಗಳನ್ನು ಖುಷಿ ಪಡಿಸುವ ಹತ್ತು ಹಲವು ಯೋಜನೆಗಳು ಜಾರಿಯಾಗಬಹುದೆಂದು ಬೆಳಗಾವಿ ಸುದ್ಧಿ ಡಾಟ್ ಕಾಮ್ ಬಳಗ ಅಂದಾಜು ಮಾಡಿದೆ
ಒಟ್ಟಾರೆ ಈ ಬಾರಿಯ ಬಜೆಟ್ ಹೇಗಿರಬಹುದು ಅನ್ನೋದನ್ನು ಖಾತ್ರಿ ಪಡಿಸಿಕೊಳ್ಳಲು ಫೆ 3 ರ ವರೆಗೆ ಕಾಯಲೇಬೇಕು