ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಎಪ್ರೀಲ್ ಹತ್ತರಂದು ನಡೆಯಲಿದೆ.ಮೇಯರ್ ಮತ್ತು ಉಪ ಮೇಯರ್ ಕಿತ್ತಾಟದ ನಂತರ ಕೊನೆಗೂ ಸಾಮಾನ್ಯ ಸಭೆಯ ಡೇಟ್ ಫಿಕ್ಸ ಆಗಿದೆ
ಮೇಯರ್ ಚುನಾವಣೆ ಬಳಿಕ ಮೊದಲ ಸಾಮಾನ್ಯ ಸಭೆ ನಡೆಯಲಿದೆ ಸಭೆಯಲ್ಲಿ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ನಗರದಲ್ಲಿ ಉಲ್ಫಣಗೊಂಡಿರುವ ನೀರಿನ ಸಮಸ್ಯೆ ಕುರಿತು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ
ನಗರದಲ್ಲಿರುವ ಮಹಾನಗರ ಪಾಲಿಕೆಯ 13 ಆಸ್ಪತ್ರೆ ಗಳು ಬಂದ್ ಆಗಿದ್ದು ಈ ಆಸ್ಪತ್ರೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಆರೋಗ್ಯ ಇಲಾಖೆಯವರು ನಗರದಲ್ಲಿ ಅರ್ಬನ್ ಹೆಲ್ತ ಸೆಂಟರ್ ಗಳನ್ನು ತೆರೆಯಲು ಪಾಲಿಕೆಯ ಆಸ್ಪತ್ರೆ ಕಟ್ಡಡಗಳನ್ನು ನೀಡುವಂತೆ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ಈ ಕುರಿತು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತಾರೆ
ಕುಡಿಯುವ ನೀರಿನ ಸಮಸ್ಯೆ,ಪಾಲಿಕೆಯ ಖುಲ್ಲಾ ಜಾಗೆಗಳನ್ನು ಲೀಜ್ ಮೇಲೆ ಕೊಡುವದು,ನಗರದಲ್ಲಿ ಸಾರ್ವಜನಿಕ ಶೌಚಾಲಯ ಗಳನ್ನು ನಿರ್ಮಿಸುವದು ಸೇರಿದಂತೆ ಹತ್ತು ಹಲವು ಮಹತ್ವದ ವಿಷಯಗಳು ಎಪ್ರಿಲ್ ಹತ್ತರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರಲಿವೆ