ಮೂರು ಸ್ಥಾಯಿ ಸಮೀತಿಗಳು ಕನ್ನಡಿಗರ ಪಾಲು..ಎಂಈಎಸ್ ದಿಕ್ಕಾಪಾಲು…
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂಈಎಸ್ ಈಗ ಸಂಪೂರ್ಣವಾಗಿ ಅಸ್ತಿತ್ವವನ್ನು ಕಳೆದುಕೊಂಡಿದೆ ಇಂದು ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ಗೆ ತೀವ್ರ ಮುಖಭಂಗವಾಗಿದೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಈಎಸ್ ಗೆ ಸ್ಪಷ್ಟ ಬಹುಮತ ಇದ್ದರೂ ಸಹ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿಗಳಲ್ಲಿ ಮೂರು ಸಮೀತಿಗಳು ಕನ್ನಡಿಗರ ಪಾಲಾಗಿ ಮೂರು ಸಮೀತಿಗಳ ಅಧ್ಯಕ್ಷರಾಗಿ ಕನ್ನಡಿಗರು ದಿಗ್ವಿಜಯ ಸಾಧಿಸಿದ್ದಾರೆ ಪೂರ್ಣ ಬಹುಮತ ಇರುವ ಎಂಈಎಸ್ ಗೆ ಕೇವಲ ಒಂದು ಸಮೀತಿ ಮಾತ್ರ ಲಭಿಸಿದೆ
ಪಾಲಿಕೆಯ ಆರೋಗ್ಯ ಸಮೀತಿ ಮಾತ್ರ ಎಂಈಎಸ್ ಪಾಲಾಗಿ ಪಾಲಿಕೆಯಲ್ಲಿ ಎಂಈಎಸ್ ದಿಕ್ಕಾಪಾಲು ಆಗಿದ್ದರೆ ಕನ್ನಡ ಗುಂಪಿನ ಸದಸ್ಯರು ತೆರಿಗೆ ಮತ್ತು ಹಣಕಾಸು,ಲೆಕ್ಕ ಪರಿಷೋಧನಾ ಸಮೀತಿ ಲೋಕೋಪಯೋಗಿ ಸಮೀತಿಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ತೆರಿಗೆ ಮತ್ತು ಹಣಕಾಸು ಸಮೀತಿಯ ಅಧ್ಯಕ್ಷರಾಗಿ ಸಂಜಯ ಸವ್ವಾಸೇರಿ,ಲೆಕ್ಕಪತ್ರ ಸಮೀತಿಯ ಅಧ್ಯಕ್ಷರಾಗಿ ಸರಳಾ ಹೇರೆಕರ,ಲೋಕೋಪಯೋಗಿ ಸಮೀತಿಯ ಅಧ್ಯಕ್ಷರಾಗಿ ಪಿಂಟು ಸಿದ್ಧಿಕಿ ಆಯ್ಕೆಯಾದರೆ ಎಂಈಎಸ್ ಸದಸ್ಯ ರಾಜೇಂದ್ರ ಬಿರಜೆ ಆರೋಗ್ಯ ಸಮೀತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ಎಂಈಎಸ್ ಗುಂಪಿನ ನಾಗೇಶ ಮಂಡೋಳ್ಕರ್ ಅವರ ಗುಂಪು ತಟಸ್ಥವಾದ ಕಾರಣ ಕನ್ನಡ ಗುಂಪಿನ ಸದಸ್ಯರು ನಾಮಪತ್ರ ಸಲ್ಲಿಸಿ ಚಾಣಾಕ್ಷ ನೀತಿ ಅನುಸರಿಸಿದ ಪರಿಣಾಮ ಪಾಲಿಕೆ ಯಲ್ಲಿ ಕನ್ನಡ ಗುಂಪಿನ ಸದಸ್ಯರು ದಿಗ್ವಿಜಯ ಸಾಧಿಸಿದರು
ಮೂರು ಸಮೀತಿಗಳ ಅಧ್ಯಕ್ಷರ ಚುನಾವಣೆ ನಡೆಯುವ ಸಂಧರ್ಭದಲ್ಲಿ ಮೂರು ಸಮೀತಿಗಳಲ್ಲಿ ಕನ್ನಡ ಹಾಗು ಎಂಈಎಸ್ ಗುಂಪಿನ ಸಮಬಲದ ಸದಸ್ಯರು ಅಂದರೆ ಎಂಈಎಸ್ ನ ಮೂರು ಸದಸ್ಯರು ಕನ್ನಡ ಗುಂಪಿನ ಮೂರು ಸದಸ್ಯರಿರುವ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ಮೇಯರ್ ಸಂಜೋತಾ ಬಾಂಧೇಕರ ಲಾಟರಿ ಎತ್ತುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರ ಕೈಗೊಂಡರು
ಮೂರು ಸಮೀತಿಗಳ ಲಾಟರಿ ಎತ್ತಿದಾಗ ಎಂಈಎಸ್ ಮೂರಾಬಟ್ಟೆಯಾಗಿ ಮೂರೂ ಲಾಟರಿಗಳಲ್ಲಿ ಕನ್ನಡ ಸದಸ್ಯರಿಗೆ ಅದೃಷ್ಟ ವಲಿಯಿತು
ಚುನಾವಣೆ ಮುಗಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ವಿರೋಧಿ ಗುಂಪಿನ ನಾಯಕ ದೀಪಕ ಜಮಖಂಡಿ ಪಾಲಿಕೆಯಲ್ಲಿ 26 ಜನ ಕನ್ನಡದ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ ಕಾರಣ ಕನ್ನಡ ಗುಂಪಿಗೆ ಜಯ ದೊರೆಯಿತು ಪಾಲಿಕೆ ಯಲ್ಲಿ ಎಂಈಎಸ್ ಒಡಕಿನ ಲಾಭವನ್ನು ನೂರಕ್ಕೆ ನೂರರಷ್ಟು ಪಡೆಯಲು ಸಾಧ್ಯ ವಾಯಿತು ಎಂಈಎಸ್ ಮೇಜಾರಿಟಿ ಇದೆ ಎಂದು ಮರೆತು ನಾಮಪತ್ರ ಸಲ್ಲಿಸದೇ ಇದ್ದರೆ ಎಲ್ಲ ಸಮೀತಿಗಳಿಗೆ ಎಂಈಎಸ್ ಸದಸ್ಯರೇ ಅವಿರೋಧವಾಗಿ ಆಯ್ಕೆ ಆಗುತ್ತಿದ್ದರು ನಾಮಪತ್ರ ಸಲ್ಲಿದಿ ಚಾಣಾಕ್ಷ ನಡೆ ಅನುಸರಿಸಿದ್ದರಿಂದಲೇ ಕನ್ನಡಿಗರಿಗೆ ಮೂರು ಸಮೀತಿಗಳು ಲಭಿಸಿವೆ ಎಂದು ದೀಪಕ ಜಮಖಂಡಿ ಹೇಳಿದರು