ಬೆಳಗಾವಿ- ಹೊಟ್ಟೆಯಲ್ಲಿ ಬೆಳೆಯತ್ತಿರುವ ಮಗುವಿಗೆ ದೋಷಗಳಿವೆ ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದು ಮಹಿಳೆಯೊಬ್ಬಳಿಗೆ ಔಷದಿ ಗುಳಗಿ ಕೊಟ್ಟ ಜಿಲ್ಲಾ ಆಸ್ಪತ್ರೆಯ ವೈದ್ಯರು ಈ ಮಹಿಳೆಗೆ ಬೆಡ್ ಕೊಡದೇ ಇರುವದರಿಂದ ಔಷದಿ ಗುಳಗಿ ನುಂಗಿ ಚಹಾ ಕುಡಿಯಲು ಹೋದ ಮಹಿಳೆಗೆ ಆಸ್ಪತ್ರೆಯ ಹೊರಗಡೆಯೇ ಗರ್ಭಪಾತವಾದ ಘಟನೆ ನಡೆದಿದೆ
ಬೆಳಗಾವಿ ಜಿಲ್ಲೆಯ ಹಳ್ಳಿಯಿಂದ ಜಿಲ್ಲಾ ಆಸ್ಪತ್ರೆಗ ಹೊಟ್ಟೆ ನೋವು ಎಂದು ಹೇಳಿಕೊಂಡು ಬಂದ ಐದು ತಿಂಗಳ ಗರ್ಭಿಣಿ ಮಹಿಳೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ತಪಾಸಣೆ ತಪಾಸಣೆ ಮಾಡಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತೊಂದರೆ ಇದೆ ಗರ್ಭಪಾತಾಡಿಸಿಕೊಳ್ಳಬೇಕೆಂದು ಹೇಳಿದ್ದಾರೆ
ತಪಾಸಣೆ ನಡೆಸಿದ ವೈದ್ಯರು ಈ ಗರ್ಭಿಣಿ ಮಹಿಳೆಗೆ ಗರ್ಭಪಾತವಾಗುವ ಔಷಧಿ ನೀಡಿದ್ದಾರೆ ಆದರೆ ಈ ಮಹಿಳೆಗೆ ಮಲಗಿಕೊಳ್ಳಲು ಆಸ್ಪತ್ರೆಯಲ್ಲಿ ಬೆಡ್ ವ್ಯೆವಸ್ಥೆ ಮಾಡಲಿಲ್ಲ ವೈದ್ಯರು ನೀಡಿದ ಔಷಧಿ ಸೇವಿಸಿ ಸುಮಾರು ಮೂರು ಘಂಟೆಗಳ ಕಾಲ ಕುಳಿತುಕೊಂಡು ಸುಸ್ತಾದ ಮಹಿಳೆ ಚಹಾ ಕುಡಿಯಲು ಆಸ್ಪತ್ರೆಯ ಹೊರಗೆ ಹೋದ ಸಂಧರ್ಭದಲ್ಲಿ ಆಲ್ಲಿಯೇ ಗರ್ಭಪಾತವಾಗಿದೆ
ಗರ್ಭಪಾತವಾದ ಬಳಿಕ ಮಹಿಳೆ ಹೆದರಿ ಈ ವಿಷಯವನ್ನು ಯಾರ ಗಮನಕ್ಕೆ ತರದೇ ಆಸ್ಪತ್ರೆಗೆ ಹೋಗಿದ್ದಾಳೆ ಐದು ತಿಂಗಳ ಮಗು ರಸ್ತೆಯಲ್ಲಿ ಬಿದ್ದಿರುವ ವಿಷಯವನ್ನು ಸಾರ್ವಜನಿಕರು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದ ಬಳಿಕ ಜಿಲ್ಲಾ ಆಸ್ಪತ್ರೆಯ ವೈದ್ಯರ ಚೆಲ್ಲಾಟ ಬಯಲಾಗಿದೆ
ನನಗೆ ಔಷಧಿ ಕೊಟ್ಟರು ಆದ್ರೆ ಮಲಗಲು ಬೆಡ್ ಕೊಡಲಿಲ್ಲ ಔಷಧಿ ಸೇವಿಸಿದ ಬಳಿಕ ಸುಸ್ತಾದ ಬಳಿಕ ನಿದ್ದೆ ಬಂದಿತು ಅದಕ್ಕೆ ಚಹಾ ಕುಡಿಯಲು ಹೋದೆ ಅಲ್ಲಿಯೇ ನನಗೆ ಗರ್ಭಪಾತವಾಗಿದೆ ಎಂದು ಈ ಮಹಿಳೆ ಆರೋಪಿಸಿದ್ದಾಳೆ
ಬೆಳಗಾವಿಯ ಈ ಸರ್ಕಾರಿ ದವಾಖಾನೆ .ದವಾಖಾನೆಯೋ ಅಥವಾ ಕಸಾಯಿ ಖಾನೆಯೋ ಅರ್ಥವಾಗುತ್ತಿಲ್ಲ ವೈದ್ಯರ ನಿರ್ಲಕ್ಷ ಮತ್ತು ಬೇಜವಾಬ್ದಾರಿಯಿಂದ ಬಡ ರೋಗಿಗಳು ಈ ಆಸ್ಪತ್ರೆಗೆ ದಾಖಲಾಗಿ ನರಳುವಂತಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ