ಬೆಳಗಾವಿ-
ಈ ಸರ್ಕಾರ ಬಂದ ಮೊದಲ ಬಜೆಟ್ ಅಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಬಜೇಟ್ ಅಲ್ಲಿ ಹಣ ಮಂಜೂರು ಮಾಡಿತ್ತು . ಹಣ ಮಂಜೂರು ಮಾಡಿ ಮತ್ತೆ ಚುನಾವಣೇಗೆ ಇನ್ನೆನೂ ೫ ತಿಂಗಳು ಉಳಿದರೂ ಸಹ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾತ್ರ ಕನಸಾಗಿ ಉಳಿದಿದೆ.
ಇದರಿಂದ ರೋಗಿಗಳಿಗೆ ಬಹಳ ತೊಂದರೆ ಆಗುತ್ತಿದ್ದು ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಜಿಲ್ಲಾಸ್ಪತ್ರೆ ಸಿಬ್ಬಂದಿ ರಾಘವೇಂದ್ರನನ್ನು ನೋಡಲಾಗದೆ ನಿನ್ನೆ ಆಸ್ಪತ್ರೆ ಸಿಬ್ಬಂದಿಯೇ ಹಣ ಸಂಗ್ರಹ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹಾವೇರಿ ಮೂಲದ ರಾಘವೇಂದ್ರ ಅರಕಾಚಾರ್ಯ ಕುಟುಂಬ ಸದಸ್ಯರು ರಸ್ತೆ ಅಪಘಾತಕ್ಕೆ ಒಳಗಾಗಿತ್ತು.
ರಾಘವೇಂದ್ರ ಕುಟುಂಬ ಬೈಕ ಮೇಲೆ ಬೆಳಗಾವಿಯಿಂದ ಹಾವೇರಿಗೆ ಹೊರಡುವಾಗ ಭೀಕರ್ ರಸ್ತೆ ಅಪಘಾತದಲ್ಲಿ ರಾಘವೇಂದ್ರ ಮತ್ರು ಅವರ ಪತ್ನಿ ಲಲಿತಾ ಹಾಗೂ ಆರು ವರ್ಷದ ಮಗು ಗಣೇಶ ಸಾವನ್ನಪ್ಪಿದರು. ಆದ್ರೆ ಸಾವು-ಬದುಕಿನ ಮಧ್ಯೆ ಹೊರಾಡುತ್ತಿದ್ದ ರಾಘವೇಂದ್ರಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾಘವೇಂದ್ರನಗೆ ಜಿಲ್ಲಾ ಆಸ್ಪತ್ರೆತಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸುವುದಕ್ಕಾಗಿ ತಮ್ಮಲ್ಲಿದ್ದ ಹಣವನ್ನ ಸಂಗ್ರಹಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಎಲ್ಲ ಆಸ್ಪತ್ರೆ ಸಿಬಂದಿ ಸೇರಿ 30 ಸಾವಿರ ಹಣವನ್ನ ಸಂಗ್ರಹಿಸಿ ಬೆಳಗಾವಿ ವಿಜಯಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ. ಸದ್ಯ ರಾಘವೇಂದ್ರ ಸ್ಥಿತಿ ಚಿಂತಾಜನಕವಾಗಿದ್ದು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ.