ಬೆಳಗಾವಿ- ಊಟದಲ್ಲಿ,ಜಿರಲೆ,ಇರುವೆ, ಸೇರಿದಂತೆ ಇತರ ಕೀಟಗಳು ಮಿಕ್ಸ್ ಆಗುತ್ತಿವೆ,ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ವಿಶೇಷ ನಿಗಾ ವಹಿಸಲು ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೊಂಕಿತರು,ತಮಗೆ ವಿತರಿಸಿದ ಆಹಾರದಲ್ಲಿ ಜಿರಲೆ,ಇರುವೆ ಮಿಕ್ಸ್ ಆಗುತ್ತಿವೆ ಎಂದು ವಿಡಿಯೋ ಮಾಡಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಮೂರು ದಿನಗಳಿಂದ ಪೋಸ್ಟ್ ಮಾಡುತ್ತಿದ್ದರು.ಸೊಂಕಿತರು ಪೋಸ್ಟ್ ಮಾಡಿದ ವಿಡಿಯೋಗಳು ವೈರಲ್ ಆದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸೊಂಕಿತರಿಗೆ ವಿತರಿಸುವ ಆಹಾರದ ಕುರಿತು ವಿಶೇಷ ನಿಗಾ ವಹಿಸಿದೆ.
ಊಟದಲ್ಲಿ,ಕೀಟ,ಊಟ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ ಸೊಂಕಿತರು ಜಿಲ್ಲಾ ಆಸ್ಪತ್ರೆಯಲ್ಲೇ ಪ್ರತಿಭಟಿಸಿದ್ದರು.ಸೊಂಕಿತರ ನೋವಿಗೆ ತ್ವರಿತವಾಗಿ ಸ್ಪಂದಿಸಿರುವ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ,ಊಟದ ವ್ಯೆವಸ್ಥೆ ಕುರಿತು ನಿಗಾ ವಹಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ಆಹಾರ ಇಲಾಖೆಯ ವಿಶೇಷ ಅಧಿಕಾರಿಯನ್ನು ಇಂದು ನಿಯೋಜಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ