ಚಿಕಿತ್ಸೆಗಾಗಿ ಬಡಪಾಯಿಯ ಕಣ್ಣೀರಧಾರೆ…

ಬೆಳಗಾವಿ- ಜಿಲ್ಲಾ ಆಸ್ಪತ್ರೆಯಲ್ಲಿ ಕ್ರೈಂ ಸುದ್ಧಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಾಗ ಮಹಿಳೆಯೊಬ್ಬಳು ಅಳುತ್ತಿರುವದು ಆತನ ಪತಿ ಸಮಾಧಾನ ಪಡೆಸುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು ಹತ್ತಿರ ಹೋಗಿ ಇವರೇಕೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಚಾರಿಸಿದಾಗ ಅವರಿಗೆ ಎದುರಾದ ನೋವಿನ ಪರಿಸ್ಥಿತಿ ತಿಳಿದು ದಿಕ್ಕೇ ತೋಚದಂತಾಯಿತು

ಚಿಕ್ಕೋಡಿ ತಾಲೂಕಿನ ಗ್ರಾಮವೊಂದರ ಈ ದಂಪತಿಗಳು ಉದ್ಯೋಗ ಆರಿಸಿ ಬೆಳಗಾವಿಗೆ ಬಂದು ದ್ವಾರಕಾ ನಗರದಲ್ಲಿ ನೆಲೆಸಿದ್ದಾರೆ ಗಂಡ ರವಿ ಗುರವ ವಾಚ್ ಮನ್ ಕೆಲಸ ಮಾಡಿ ಸಂಸಾರದ ಬಂಡಿ ಓಡಿಸುತ್ತಿದ್ದಾನೆ ಹೆಂಡತಿ ತೇಜಸ್ವಿನಿ ತನ್ನ ಎರಡು ಹೆಣ್ಣು ಕಂದಮ್ಮಗಳ ಪೋಷಣೆ ಮಾಡುತ್ತಿದ್ದಾಗಲೇ ಇವರಿಬ್ಬರ ನೆಮ್ಮದಿಯ ಬದುಕಿನಲ್ಲಿ ದೊಡ್ಡ ನೋವಿನ ಅಲೆ ಯೇ ಅಪ್ಪಳಿಸಿ ಸುಖಸಂಸಾರದ ಬಂಡಿಯನ್ನು ಬುಡಮೇಲು ಮಾಡಿತು

ರವಿ ಗುರವ ಮತ್ತು ತೇಜಸ್ವಿನಿ ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು ಇಬ್ಬರಿಗೆ ಮುದ್ದಾದ ಎರಡು ಹೆಣ್ಣು ಮಕ್ಜಳಿದ್ದಾರೆ ಆದರೆ ಕೆಲ ದಿನಗಳ ಹಿಂದೆ ತೇಜಸ್ವಿನಿಯ ಎರಡೂ ಕಾಲುಗಳು ನಿಷ್ಕ್ರಿಯ ವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ ತನಗಾಗುತ್ತಿರುವ ನೋವು ತಾಳರಾದೇ ಆಸ್ಪತ್ರೆಯಲ್ಲಿ ಕಣ್ಣೀರು ಸುರಿಸುತ್ತಿದ್ದಾಳೆ

ಗಂಡ ರವಿಯ ಹೆಗಲ ಮೇಲೆ ತಲೆಯನ್ನಿಟ್ಟು ನಾನು ಬದುಕಲು ಸಾಧ್ಯವಿಲ್ಕ ನನ್ನ ಚಿಕಿತ್ಸೆಗೆ ಬೇಕಾಗುವಷ್ಟು ಹಣವೂ ನಮ್ಮ ಬಳಿ ಇಲ್ಲ ನನ್ನ ಎರಡೂ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳಿ ಎಂದು ತೇಜಸ್ವಿನಿ ಬಿಕ್ಕಿ ಬಿಕ್ಕಿ ಅತ್ತರೆ ಗಂಡ ರವಿ ಅಳಬೇಡ ನನ್ನ ಜೀವ ಕೊಟ್ಟಾದರೂ ನಿನಗೆ ಚಿಕಿತ್ಸೆ ಕೊಡಿಸುವೆ ಹೆದರಬೇಡ ಎಂದು ಸಮಾಧಾನ ಪಡಿಸುತ್ತಿರುವ ದೃಶ್ಯ ನೋಡಿದವರ ಕಣ್ಣೀರು ಕಪಾಳಕ್ಕೆ ಬಂದಿತ್ತು

ಈ ಬಡ ದಂಪತಿಯ ಬದುಕಿನಲ್ಲಿ ತಮಗೆ ನಿಭಾಯಿಸಲಾಗದ ಸಮಸ್ಯೆ ಎದುರಾಗಿದೆ ಗಂಡ ರವಿ ಗುರವ ವಾಚ್ ಮನ್ ಕೆಲಸ ಮಾಡುತ್ತಿದ್ದಾನೆ ಹೆಂಡತಿ ತೇಜಸ್ವಿನಿಯ ಎರಡೂ ಕಾಲುಗಳು ಸಂಪೂರ್ಣವಾಗಿ ನಿಷ್ಕ್ರಿಯ ವಾಗಿವೆ ತೇಜಸ್ವಿನಿ ಗುಣಮುಖವಾಗಬೇಕಾದರೆ ಅತ್ಯಾಧುನಿಕ ಚಿಕಿತ್ಸೆಯ ಅಗತ್ಯವಿದೆ ಅದಕ್ಕೆ ಎರಡು ಲಕ್ಷಕ್ಕೂ ಹೆಚ್ವು ಹಣ ಬೇಕು ಉಳ್ಳವರು ಸಹಾಯ ಹಸ್ತ ಚಾಚಿದ್ದಲ್ಲಿ ಇವರಿಬ್ಬರ ಬಾಳಲ್ಲಿ ಮತ್ರೇ ಬೆಳದಿಂಗಳು ಮೂಡಬಹುದು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *