Breaking News

ಬೆಳಗಾವಿ ಅಧಿವೇಶನ ಹಾಳು ಮಾಡಲು ಬಿಜೆಪಿ ಹುನ್ನಾರ,- ಕಾಂಗ್ರೆಸ್ ನಾಯಕರ ಆರೋಪ

ಬೆಳಗಾವಿ
ಸಮ್ಮಿಶ್ರ ಸರಕಾರದ‌ ಸಚಿವ ಸುಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಗೆ ಎರಡು ಹಾಗೂ ಜೆಡಿಎಸ್ ಗೆ ಎರಡು ಸಚಿವ ಸ್ಥಾನ ಕಾಲಿಯಿದೆ. ಶೀಘ್ರದಲ್ಲಿಯೇ ಅವುಗಳನ್ನು ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದ ಅಭಿವೃದ್ಧಿಯ ಕೆಲಸ ನಮಗೆ ಕೈ ಹಿಡಿಯಲಿಲ್ಲ. ಬಿಜೆಪಿಯವರು ಮಾಡಿರುವ ಅಪಪ್ರಚಾರದಿಂದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿನ್ನಡೆಯಾಯಿತು ಎಂದರು.
ಸುಳ್ಳು ಪ್ರಚಾರದಿಂದ ಜನರನ್ನು ಮರಳು ಮಾಡಿ ಅಧಿಕಾರಕ್ಕೆ‌ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರಿಗೆ ನೀಡಿದ ಭರಬಸೆಯನ್ನು ಈಡೇರಿಲು ಹೆಣಗಾಡುತ್ತಿದ್ದಾರೆ ಎಂದರು.
ಬಿಜೆಪಿ ಪ್ರತಿ ಚುನಾವಣೆಗೆ ಒಂದೊಂದು ವಾಗ್ದಾನ ಮಾಡಿತ್ತಾರೆ. ಅಧಿಕಾರಕ್ಕೆ‌ ಬಂದು ಹದಿನೈದು ‌ದಿನದಲ್ಲಿ ಸಾಮಾನ್ಯ ಜನರಿಗೆ ಹದಿನೈದು ಲಕ್ಷ ರು. ಹಣ ಎಲ್ಲರ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದರು. ಪ್ರತಿ ವರ್ಷ ನಿರುದ್ಯೋಗಿಗಳಿಗೆ ಎರಡು ಕೋಟಿ‌ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ದೇಶದ ಜನರಿಗೆ ಮೋಸ‌ ಮಾಡಿದೆ ಎಂದರು.
ಕರ್ನಾಟಕದಲ್ಲಿ ಹತ್ತು ಲಕ್ಷ‌ ಶಕ್ತಿ‌ ನೊಂದಣೆ ಗುರಿ ಇಟ್ಟುಕೊಂಡಿದ್ದೇವೆ. ಈಗಾಗಲೇ ಏಳು ಲಕ್ಷ ನೊಂದಣಿ ಮಾಡಲಾಗಿದೆ. ಬೆಳಗಾವಿಯಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದ್ದರಿಂದ ಒಂದು ಎಂಎಲ್ ಎ ಕ್ಷೇತ್ರದಲ್ಲಿ ಮೂರು ಸಾವರ ನೊಂದಣಿ‌ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಪಿ.ವಿ.ಮೋಹನ ಮಾತನಾಡಿ, ರಾಹುಲ್ ಗಾಂಧಿಯವರ ಕನಸಿನ ಕೂಸು ಶಕ್ತಿ ಯೋಜನೆಯ ಕಾರ್ಯಕ್ರಮ ದೇಶದ್ಯಾಂತ ಮಾಡಲಾಗುತ್ತಿದೆ. ಇದನ್ನು ರಾಜಸ್ಥಾನದಲ್ಲಿ ಪ್ರಾರಂಭವಾಗಿ ಈಗ ದೇಶದ ಎಲ್ಲಡೆ ಪ್ರಾರಂಭಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ನ ಶಕ್ತಿ ಕಾರ್ಯಕ್ರಮವನ್ನು ಪಕ್ಷದ‌ ಬಲವರ್ದನೆ ಹಾಗೂ ದೇಶವನ್ನು ಕಟ್ಟುವ ಉದ್ದೇಶದಿಂದ ಈ‌ ಯೋಜನೆಯನ್ನು ಆರಂಭಿಸಲಾಗಿದೆ ಎಂದರು.
ಕಾರ್ಯಕರ್ತರಲ್ಲಿ ಸಾಕಷ್ಟು ವಿಚಾರಗಳಿವೆ. ಅಭಿಪ್ರಾಯವಿದೆ. ಅದನ್ನು‌ ಶಕ್ತಿ ಕಾರ್ಯಕ್ರಮದಿಂದ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಮಾತನಾಡುವ ಕಾರ್ಯಕರ್ತರನ್ನು ನೇರವಾಗಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಯೋಜನೆಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿಯೂ ಹುಕ್ಕೇರಿ, ಕಿತ್ತೂರ, ಖಾನಾಪುರ, ಸೇರಿದಂತೆ ಪ್ರಮುಖ ಕಡೆಗಳಲ್ಲಿ ಮೊಬೈಲ್ ಮೂಲಕ ಶಕ್ತಿ ಯೋಜನೆಯನ್ನು ಸಿದ್ದಗೊಳ್ಳಿಸಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಮ್ಮಿಶ್ರ ಸರಕಾರದ ಮೊದಲ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಈ ಭಾಗದ ಶಾಸಕರು ಭಾಗಿಯಾಗಬೇಕು. ವಿರೋಧ ಪಕ್ಷದವರು ಅಧಿವೇಶನದಲ್ಲಿ ರೈತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಅಧಿವೇಶನ ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಆಸ್ಪದ ನೀಡಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘ ಪರಿವಾರದ ಬಗ್ಗೆ ದೇಶದ ಜನರು ಮಾತನಾಡುತ್ತಿದ್ದಾರೆ. ದೇಶ ಇಬ್ಬಾಗವಾಗಲು ಸಂಘ ಪರಿವಾರದವರೇ ಕಾರಣ ಎಂದು ಆರೋಪಿಸಿದರು.

ಮೋಹನ ರಡ್ಡಿ, ರಾಜಾಸಾಬ್,‌ಶೇಖರಪ್ಪ, ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  1. ————
    ಕಳೆದ‌ ಆರು ತಿಂಗಳಿನಿಂದ ಸಮ್ಮಿಶ್ರ ಸರಕಾರ ಬೀಳುತ್ತದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಬಿಜೆಪಿಯ ಯಡಿಯೂರಪ್ಪ ನವರು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು‌‌ ಭೇಟಿಯಾಗಿದ್ದು ಸೌಹಾರ್ದತೆಯಿಂದ ಇದಕ್ಕೆ ರಾಜಕೀಯ ಬಣ್ಣ‌ ಬಳೆಯುವುದು ಸರಿಯಲ್ಲ ಎಂದು ಮತ್ತಿಕಟ್ಟಿ ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *