ಬೆಳಗಾವಿ- ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತು ಪರಾಮರ್ಶೆ ನಡೆಯಬೇಕು ,ಕೆಪಿಸಿಸಿ ಅಧ್ಯಕ್ಷ್ಯ ದಿನೇಶ್ ಗುಂಡುರಾವ್ ಮತ್ತು ಸಿದ್ರಾಮಯ್ಯನವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಇಬ್ಬರ ರಾಜೀನಾಮೆ ಅಂಗೀಕರಿಸಬಾರದು ಎಂದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ,ರಾಜು ಸೇಠ,ಚಿಂಗಳೆ ಒತ್ತಾಯಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಜಂಟೀ ಪತ್ರಿಕಾಗೋಷ್ಠಿ ನಡೆಸಿದ ಮೂವರು ಜಿಲ್ಲಾದ್ಯಕ್ಷರುಗಳು ಇಬ್ಬರು ಕಾಂಗ್ರೆಸ್ ನಾಯಕರ ರಾಜೀನಾಮೆಯಿಂದ ಕಾರ್ಯಕರ್ತರು ಆತ್ಮ ವಿಶ್ವಾಸ ಕುಂದುತ್ತದೆ ಅವರು ಕೂಡಲೇ ರಾಜೀನಾಮೆ ವಾಪಸ್ ಪಡೆದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲೀನ ಕುರಿತು ಚರ್ಚೆ ಮಾಡಿ ಎಡವಿದ್ದು ಎಲ್ಲಿ ಅನ್ಬೋದರ ಬಗ್ಗೆ ಪರಾಮರ್ಶೆ ನಡೆಸಿ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ತುಂಬಬೇಕು ಎಂದರು
ಪ್ರಜಾತಂತ್ರ ವ್ಯವಸ್ಥೆ ತಲ್ಲಿ ಸೋಲು ಗೆಲುವು ಸಹಜ ಉಪ ಚುನಾವಣೆಯ ಜನಾದೇಶವನ್ನು ನಾವು ಗೌರವಿಸಿ ಸೋಲನ್ನು ಒಪ್ಪಿಕೊಳ್ಳುತ್ತೇವೆ ಸೋಲಾಗಿದೆ ಎಂದು ಇಬ್ಬರು ನಾಯಕರು ರಾಜೀನಾಮೆ ನೀಡುವ ಅಗತ್ಯವಿಲ್ಲ ಹೈಕಮಾಂಡ್ ಇವರ ರಾಜೀನಾಮೆ ಅಂಗೀಕರಿಸದೇ ಇಬ್ಬರೂ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ಕೊಡಬೇಕು ಎಂದು ಮೂವರು ಜಿಲ್ಲಾಧ್ಯಕ್ಷರುಗಳು ಒತ್ತಾಯಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ