ಬೆಳಗಾವಿ:
ನರೇಂದ್ರ ಮೋದಿ ಅವರ ನಿಜವಾದ ಮುಖವಾಡ ನವೆಂಬರ್ 8 ರಂದು ನೋಟ್ ಬಂದ್ ಮಾಡುವುದರ ಮೂಲಕ ಬಯಲಾಗಿದೆ. ಏಕಾಏಕಿ ನೋಟ್ ಬಂದ್ ಮಾಡಿರುವುದು ಏಕೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜನರಿಗೆ ಕಾಂಗ್ರೆಸ್ ನವರು ಭ್ರಷ್ಟರು ಎಂದು ಬಿಂಬಿಸುತ್ತಿದ್ದಾರೆ. ನೋಟ್ ಬಂದ್ ನಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸಾಕಷ್ಟು ಜನ ಬೀದಿಪಾಲಾಗಿದ್ದಾರೆ. ಇನ್ನೂವರೆಗೆ ನೋಟಿನ ಸಮಸ್ಯೆ ಬಗೆ ಹರಿದಿಲ್ಲ. ಈ ಬಗ್ಗೆ ಪ್ರಧಾನಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಸೇಖನೂರ ಮಾತನಾಡಿ, ನ.8 ರಂದು ದೇಶದ ಪ್ರಧಾನಿ ನೋಟ್ ಬಂದಿ ಮಾಡಿದ್ದು ಸರಿಯಾಗಿಲ್ಲ. ಊಟ ನೀರು ಇಲ್ಲದೇ ಹಣಕ್ಕಾಗಿ ಎಟಿಎಂ ಎದುರು ಸಾಲುಗಟ್ಟಲೆ ಇನ್ನೂ ನಿಲ್ಲುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಕಾಂಗೈ ಕಾರ್ಯಕರ್ತರು ಧ್ವನಿ ಎತ್ತಬೇಕಿ ಎಂದರು.
ಶಾಸಕ ಫಿರೋಜ್ ಸೇಠ್ ಮಾತನಾಡಿ, ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ಪಕ್ಷದ ಕುರಿತು ಜನ ಮಾತನಾಡುವ ಹಾಗೇ ಮಾಡಬೇಕು. ಕಾರ್ಯಕರ್ತರು ನಿಷ್ಠಾವಂತ ಕೆಲಸ ಮಾಡಿದರೆ ಗ್ಯಾರಂಟಿ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ. ಕಾರ್ಯಕರ್ತರು ನಾ ಮಾಡಿದೆ ಆತ ಮಾಡಲಿಲ್ಲ ಎಂದು ಜಗಳವಾಡುತ್ತ ಸಾಗಿದರೆ ಕಾಂಗೈ ಬರಲು ಸಾದ್ಯವಿಲ್ಲ. ಕಾರಣ ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಗ್ರಾಮೀಣಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭಾವಗಿ 4 ವರ್ಷ ಪ್ರಾರಂಭವಾಗಿದೆ. ಇವುಗಳ ವರದಿಯನ್ನು ಕೆಪಿಸಿಸಿ ಗೆ ಸಲ್ಲಿಸಲಾಗುವುದು. ಕಾರಣ ಯಾರಯಾರು ಅಭಿಯಾಣ ಮಾಡಿರುವ ಕುರಿತು ವರದಿ ನನ್ನ ಬಳಿ ನೀಡಿ. ಇದರಲ್ಲಿ ಯಾರೂ ಸಬೂಬ ಹೇಳಬಾರದು. ಒಂದು ವೇಳೆ ಸದಸ್ಯತ್ವದ ಕಾರ್ಯದ ಬಗ್ಗೆ ಹಿಂದೇಟು ಹಾಕಿದವರ ವಿರುದ್ದ ಲಕ್ಷ್ಮೀ ಹೆಬ್ಬಾಳಕ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ರಾಜು ಸೇಠ, ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಮತ್ತು ನಗರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಮಾರ್ಚ ೬ ರಿಂದ ವೇದನೆಯ ಚರ್ಚಾಕೂಟ
ಮಾರ್ಚ 6 ರಿಂದ ಬೆಳಗಾವಿ ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಅವರ ಆತುರದ ನಿರ್ಧಾರಗಳಿಂದ ಜನರಿಗಾಗಿರುವ ವೇದನೆ ಕುರಿತು ಚರ್ಚಿಸಲು ಜನವೇಧನೆ ಚರ್ಚಾಕೂಟಗಳನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ ವೀಕ್ಷಕ ಲಕ್ಷ್ಮಾ ರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 6 ರಿಂದ 10 ರವೆರೆ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರದಲ್ಲಿ ಜನವೇಧನಾ ಚರ್ಚಾಕೂಟಗಳು ನಡೆಯುತ್ತವೆ. ಆರ್.ಬಿ.ತಿಮ್ಮಾಪುರ ಸೇರಿದಂತೆ 4 ಜನ ವೀಕ್ಷಕರು ಚರ್ಚಾ ಕೂಟದಲ್ಲಿ ಭಾಗಿಯಾಗುತ್ತಾರೆ ಎಂದರು.
ಪ್ರಧಾನಿ ಮೋದಿ ಅವರ ಡಿ ಮಾನಿಟೇಶನ್ ಮತ್ತು ಡಿಜಟೈಲಾಯಿಜೇಶನ್‍ದಿಂದ ದೇಶ ಅವನತಿಯತ್ತ ಸಾಗಿದೆ. ದೇಶದ ಬಡವರು ಕೇಂದ್ರದ ನಿರ್ಧಾರದಿಂದ ಹಲವಾರು ಬಗೆಯ ವೇಧನೆಗಳು ಅನುಭವಿಸುತ್ತಿದ್ದಾರೆ. ನಮೋ ಹೇಳಿದಂತೆ ನಡೆದುಕೊಳ್ಳಲಿಲ್ಲ. ಅವರ ನಿರ್ಧಾರಗಳಿಂದ ಕಾರ್ಪೋರೆಟರ್ ಸೆಕ್ಟರ್‍ಗೆ ಮಾತ್ರ ಲಾಭವಾಗಿದೆ ಎಂದು ರೆಡ್ಡಿ ಆರೋಪಿಸಿದರು.