Breaking News

ದೇಶಕ್ಕಾಗಿ ಬಿಜೆಪಿ ಕೊಡುಗೆ ಏನು? ಗುಂಡೂರಾವ ಪ್ರಶ್ನೆ

ಬೆಳಗಾವಿ- ಗ್ರಾಮ ಸ್ವರಾಜ್ ಕಲ್ಪನೆ ಸ್ವಾತಂತ್ರ್ಯ ಪೂರ್ವದಿಂದಲೂ ಹುಟ್ಟಿದ ಕಲ್ಪನೆ,ಗ್ರಾಮ ಸ್ವರಾಜ್ ಮಹಾತ್ಮಾ ಗಾಂಧೀಜಿ ಅವರ ಕನಸಾಗಿತ್ತು ಸ್ವಾತಂತ್ರ್ಯದ ನಂತರ ಪ್ರಧಾನಿ ನೆಹರು ಅವರು ಅದಕ್ಕೆ ಹೆಚ್ಚಿನ ಮಹತ್ವ ನೀಡಿದರು ಗ್ರಾಮ ಸ್ವರಾಜ್ ಕಾಯ್ದೆ ರೂಪಿಸುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ ಹೇಳಿದರು

ಬೆಳಗಾವಿ ನಗರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ವತಿಯಿಂದ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು ಈ ಅಭಿಯಾನ ಉದ್ಘಾಟಿಸಿ ದಿನೇಶ ಗುಂಡೂರಾವ ಮಾತನಾಡಿದರು

ಗ್ರಾಮ ಪಂಚಾಯತಿಗಳ ಮೂಲಕವೇ ಕೇಂದ್ರ ಹಾಗು ರಾಜ್ಯ ಸರ್ಕಾರದ ಯೋಜನೆಗಳು ಅನುಷ್ಠಾನ ಗೊಳ್ಳಬೇಕು ಗ್ರಾಮ ಸ್ವರಾಜ್ ಕಾಯ್ದೆಗೆ ಹೆಚ್ಚಿನ ಅಧಿಕಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟ ನಡೆಸಿದೆ ಈಗಾಗಲೇ ಹತ್ರೊಂಬತ್ತು ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ ನಡೆಸಲಾಗಿದೆ ಎಂದು ದಿನೇಶ ಗುಂಡೂರಾವ ಹೇಳಿದರು

ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಹಿನ್ನಲೆ ಇದೆ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದೆ ಆದರೂ ಬಿಜೆಪಿ ನಾಯಕರು ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನು ಮುಂದೆ ಬಿಜೆಪಿ ದೇಶಕ್ಕಾಗಿ ಏನು ಮಾಡಿದೆ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಏನ? ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದಾಗ ಅದಕ್ಕೆ ಆಗಿನ ಜನ ಸಂಘ ಈಗಿನ ಬಿಜೆಪಿ ಮತ್ತು ಮುಸ್ಲೀಂ ಲೀಗ್ ವಿರೋಧಿಸಿತ್ತು ಎಂದು ಗುಂಡೂರಾವ ಆರೀಪಿಸಿದರು

ಬಿಜೆಪಿ ಮೀಸಲಾತಿಗೆ ವಿರೋಧಿಸುತ್ತದೆ ಆದರೂ ಅಂಬೇಡ್ಕರ್ ಅವರ ಹೆಸರು ಬಳಿಸಿಕೊಳ್ಳುತ್ತಿದೆ ಕಾಂಗ್ರೆಸ್ ಪಕ್ಷ ದ ನಾಯಕರಾದ ಸರ್ದಾರ್ ಪಟೇಲ ಮಹಾತ್ಮಾ ಗಾಂಧೀ ಯಂತಹ ನಾಯಕರನ್ನು ಬಿಜೆಪಿ ಹೈಜಾಕ್ ಮಾಡಿದೆ ದೇಶದ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಏನು ಎಂದು ದಿನೇಶ ಗುಂಡೂರಾವ ಪ್ರಶ್ನಿಸಿದರು

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ಲಂಚ ಪಡೆದು ಜೈಲುವಾಸ ಅನುಭವಿಸಿದ್ದಾರೆ ಸಾಕ್ಷಾಧಾರ ಇಲ್ಲದೇ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ತಳ ಬುಡ ಇಲ್ಲದೇ ಆರೋಪ ಮಾಡಬೇಡಿ ಈ ರೀತಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಇದರಲ್ಲಿ ಯಾವುದೇ ಹುರಳಿಲ್ಲ ಎಂದು ದಿನೇಶ ಗುಂಡೂರಾವ ಬಿಜೆಪಿ ವಿರುದ್ಧ ಟೀಕಾ ್ರಹಾರ ನಡೆಸಿದರು

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ ಕಾಂಗ್ರೆಸ ಪಕ್ಷ ಸರ್ವಜನಾಂಗದ ಪಕ್ಷ ಕಾಂಗ್ರೆಸ್ ಹುಟ್ಟಿದ್ದೇ ಬಡವರ ಸೇವೆಗಾಗಿ ಬಿಜೆಪಿ ಬಂಡವಾಳ ಶಾಹಿಗಳ ಹಿತಕ್ಕಾಗಿ ಹುಟ್ಟಿರುವ ಪಕ್ಷವಾಗಿದೆ ತಮ್ಮ ವಿರುದ್ಧ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹುಚ್ಚರಾಗಿದ್ದಾರೆ ನನ್ನ ವಿರುದ್ಧದ ಆರೋಪ ಸಿದ್ಧವಾದಲ್ಲಿ ಮಂತ್ರಿ ಸ್ಥಾನಕ್ಕೆ ಅಷ್ಟೆ ಅಲ್ಲ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವೆ ಎಂದು ರಮೇಶ ಜಾರಕಿಹೊಳಿ ಹೇಳಿದರು

ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಡಿ ಆರ್ ಪಾಟೀಲ,ವೀರಕುಮಾರ ಪಾಟೀಲ,ಅರುಣ ಕಟಾಂಬಳೆ,ಜಯಶ್ರೀ ಮಾಳಗಿ ಅಂಜಲಿ ನಿಂಬಾಳ್ಕರ್ ರಮೇಶ ಉಟಗಿ   ಶಿವನಗೌಡ ಪಾಟೀಲ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *