ಬೆಳಗಾವಿ- ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಲ್ಲೆ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿಯೇ ಮೊಟ್ಟ ಮುದಲ ಕಾಂಗ್ರೆಸ್ ಮಹಾ ಅಧಿವೇಶನ ನಡೆದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡ ಆಗಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕನಸು ಕಂಡಿದ್ದರು
ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಜಿಲ್ಲಾಧ್ಯಕ್ಷರಾಗಿರುವಾಗ ಕಚೇರಿ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನು ಆಗಿನ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಮುಂದಿಟ್ಟಾಗ ಸತೀಶ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ನಗರದ ರಾಯಣ್ಣ ವೃತ್ತದ ಬಳಿ ಇರುವ ಪಾಲಿಕೆಯ ಖುಲ್ಲಾ ಜಾಗೆಯನ್ನು ಮಂಜೂರು
ಮಾಡಿಸುವಲ್ಲಿ ಯಶಸ್ವಿ ಆಗಿದ್ದರು
ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸಿ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದರು
ಕಾಂಗ್ರೆಸ್ ಭವನ ನಿರ್ಮಾಣದ ಕಾಮಗಾರಿ ಆರಂಭದಲ್ಲಿ ಭರದಿಂದ ಸಾಗಿತ್ತು ಆದರೆ ಕಾಮಗಾರಿ ಸ್ಥಗಿತಗೊಂಡು ಬರೊಬ್ಬರಿ ಒಂದು ವರ್ಷ ಗತಿಸಿದೆ ಆರ್ಥಿಕ ತೊಂದರೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ
ಲಕ್ಷ್ಮೀ ಹೆಬ್ಬಾಳಕರ ಅವರ ಸಂಕಲ್ಪ ಸತೀಶ ಜಾರಕಿಹೊಳಿ ಅವರ ಇಚ್ಛಾಶಕ್ತಿ,ಕಾಂಗ್ರೆಸ್ ಅಭಿಮಾನಿಗಳ ಉತ್ಸಾಹದಿಂದಾಗಿ ಕಾಂಗ್ರೆಸ್ ಭವನದ ಕಾಮಗಾರಿ ಅದ್ಧೂರಿಯಾಗಿ ನಡೆದಿತ್ತು
ಮಾಜಿ ಮಂತ್ರಿ ಸತೀಶ ಜಾರಕಿಹೊಳಿ,ಹಾಲಿ ಮಂತ್ರಿ ರಮೇಶ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ,ಶಂಕರ ಮುನವಳ್ಳಿ ಸೇರಿದಂತೆ ಹಲವಾರು ಜನ ಆರ್ಥಿಕ ಸಹಾಯ ಮಾಡಿದ್ದರು ಜಿಲ್ಲೆಯ ಕಾಂಗ್ರೆಸ್ ಅಭಿಮಾನಿಗಳು ನೀಡಿದ ದೇಣಿಗೆಯಿಂದಾಗಿ ಕಾಮಗಾರಿ ಇಲ್ಲಿಯವರೆಗೆ ಸಾಗಿತ್ತು ಆದರೆ ಕೆಲವು ಹಾಲಿ ಶಾಸಕರೇ ಆರ್ಥಿಕ ಸಹಾಯ ಮಾಡದೇ ಇರುವದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ
ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮೀತಿ ಬೆಳಗಾವಿ ಮಹಾನಗರ ಪಾಲಿಕೆಗೆ ಜಾಗೆಯ ಮೊತ್ತ 55 ಲಕ್ಷ ರೂ ಪಾವತಿ ಮಾಡಿ ತನ್ನ ಖಜಾನೆ ಖಾಲಿ ಮಾಡಿಕೊಂಡಿದೆ ಆದರೆ ಈಗ ಕಟ್ಟಡ ನಿರ್ಮಾಣದ ಕಾಮಗಾರಿಗೆ ಜಿಲ್ಲಾ ಸಮೀತಿ ಹತ್ತಿರ ದುಡ್ಡಿಲ್ಲ ಪಕ್ಷದ ಲಾಭ ಪಡೆದು ಶಾಸಕರಾದವರೇ ದುಡ್ಡು ಕೊಡಲು ತಯಾರಿಲ್ಲ ಹೀಗಾಗಿ ಭವನದ ಕಾಮಗಾರಿ ಅರ್ದಕ್ಕೆ ನಿಂತಿದೆ
ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಚೇರಿ ಕಟ್ಟಡ ಬೇಕು ಎಂದು ಕನಸು ಕಂಡಿದ್ದ ಜಿಲ್ಲೆಯ ಕಾಂಗ್ರೆಸ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ
ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿ ಪುನರಾರಂಭ ಮಾಡ್ತಾರೋ ಅಥವಾ ಈ ಭವನದ ಕಾಮಗಾರಿ ಹಳ್ಳ ಹಿಡಿಯುತ್ತದೆಯೋ ಕಾದು ನೋಡಬೇಕು