Breaking News

ದೊಡ್ಡ ಅನಾಹುತ ತಪ್ಪಿಸಿದ, ಬೆಳಗಾವಿ ಕಾಪ್ಸ ಗೆ..ನಮ್ಮದೊಂದು…. .ಹ್ಯಾಟ್ಸಪ್..!

ಬೆಳಗಾವಿ-ಬೆಳಗಾವಿ ಪೋಲೀಸರು ಶಾರ್ಪ ಶೂಟರ್ ಗಳ ಬಗ್ಗೆ ಮೈ ಮರೆತು ಕುಳಿತುಕೊಂಡಿದ್ದರೆ ದೊಡ್ಡ ಅನಾಹುತವೇ ಕಾದಿತ್ತು ಸತತವಾಗಿ ಎರಡು ದಿನಗಳ ಕಾಲ ಆಗುಂತಕರ ಮೇಲೆ ನಿಗಾ ವಹಿಸಿ ಅವರನ್ನು ಪತ್ತೆ ಮಾಡಿ ಬೆನ್ನಟ್ಟಿ ,ಬಂಧಿಸಿ ದೊಡ್ಡ ಅನಾಹುತವನ್ನೇ ತಪ್ಪಿಸಿ ಸಹಾಸಗೈದ ಬೆಳಗಾವಿ ಕಾಪ್ಸ (ಪೋಲೀಸ್) ಗೆ ಹ್ಯಾಟ್ಸಪ್ ಹೇಳಲೇ ಬೇಕು

ಎರಡು ದಿನದ ಹಿಂದೆ ಬೆಳಗಾವಿಯ ಲಾಜ್ ನಲ್ಲಿ ತಂಗಿದ್ದ ಏಳು ಜನ ಶೂಟರ್ ಗಳು ಕಂಟ್ರೀ ಪಿಸ್ತೂಲ್ ೨೯ ಸುತ್ತು ಗುಂಡು ಚಾಕು ಚೂರಿ ಹಲವಾರು ರೀತಿಯ ಮಾರಕಾಸ್ತ್ರಗಳನ್ನು ಹೊಂದಿದ್ದರು ಸೊಂಟಕ್ಕೆ ಪಸ್ತೂಲ್ ಕಟ್ಟಿಕೊಂಡು ಬೆಳಗಾವಿ ನಗರದ ಶ್ರೀಮಂತರ ಮನೆಗಳ ಡಕಾಯತಿ ಮಾಡಲು ಸ್ಕೇಚ್ ಹಾಕುವ ಸಂಧರ್ಭದಲ್ಲಿಯೇ ಈ ಡಕಾಯತರು ಪೋಲೀಸರ ಬಲೆಗೆ ಬಿದ್ದರುವದು ಸಂತಸದ ಸಂಗತಿಯಾಗಿದೆ

ಏಳು ಜನ ಶಾರ್ಪ ಶೂಟರ್ ಗಳಲ್ಲಿ ಒಬ್ಬ ಪರಾರಿಯಾಗಿದ್ದು ಆರು ಜನ ಪೋಲೀಸರ ವಶದಲ್ಲಿದ್ದಾರೆ ಈ ಆಗುಂತಕರು ಬೆಳಗಾವಿ ನಗರದ ಶ್ರೀಮಂತರ ,ವಿಐಪಿ ಗಳ ಮನೆಗಳನ್ನು ಲೂಟಿ ಮಾಡಿ ಇದೇ ಹಣದಿಂದ ಹಿಂಡಲಗಾ ಕಾರಾಗೃಹ ದಲ್ಲಿರುವ ವಿನೋದ ಶೆಟ್ಟಿ ಎಂಬ ಗೂಂಡಾನನ್ನು ಅಪಹರಿಸಿಕೊಂಡು ಹೋಗುವ ಸ್ಕೆಚ್ ಹಾಕಿದ್ದರು

ವಿನೋದ ಶೆಟ್ಟಿ ಅನಾರೋಗ್ಯದ ನೆಪ ಮಾಡಿ ಬೆಳಗಾವಿಯ ಸಿವ್ಹಿಲ್ ಆಸ್ಪತ್ರೆಗೆ ಬಂದಾಗ ಪಿಸ್ತೂಲ್ ತೋರಿಸಿ ಶೆಟ್ಟಿಯನ್ನು ಬಚಾವ್ ಮಾಡುವದು ಶೂಟರ್ ಗಳ ಪ್ಲ್ಯಾನ್ ಆಗಿತ್ತು ಅದಕ್ಕಾಗಿಯೇ ಈ ಶೂಟರ್ ಗಳು ಸಿವ್ಹಿಲ್ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿನ ಕೈದಿಗಳ ಸೆಲ್ ನೋಡಲು ಆಸ್ಪತ್ರೆಗೆ ಹೋದ ಸಂಧರ್ಭದಲ್ಲಿ ಬೆಳಗಾವಿ ಪೋಲೀಸರು ಬೆನ್ನಟ್ಟಿ ಅವರನ್ನು ಬಂಧಿಸುವ ಮೂಲಕ ಕಿರಾತಕರ ಪ್ಲ್ಯಾನ್ ಫೇಲ್ ಮಾಡಿದ್ದಾರೆ

ಈ ಕಿರಾತಕರ ಜೊತೆಗೆ ಹಿಂಡಲಗಾ ಕಾರಾಗೃಹದ ಕೆಲ ಅಧಿಕಾರಿಗಳೂ ಶಾಮೀಲಾಗಿರುವ ಬಗ್ಗೆ ಪೋಲೀಸರಿಗೆ ಶಂಕೆ ವ್ಯಕ್ತವಾಗಿದ್ದು ಬಂಧಿತ ಕಿರಾತಕರನ್ನು ತೀವ್ರ ವಿಚಾರಣೆಗೊಳಪಡಿಸಿ ಪೋಲೀಸರು ಸತ್ಯಾಂಶವನ್ನು ಬಯಲಿಗೆಳೆಯಲಿದ್ದಾರೆ

ಒಂದು ವೇಳೆ ಶಾರ್ಪ ಶೂಟರ್ ಗಳು ಬೆಳಗಾವಿಗೆ ಬಂದಿರುವ ಮಾಹಿತಿ ಪೋಲೀಸರಿಗೆ ಸಿಗದೇ ಹೋಗಿದ್ದರೆ ನಗರದ ಹಲವಾರು ವಿಐಪಿಗಳ ಮನೆಗಳು ಲೂಟಿಯಾಗಿ ರಕ್ತಪಾತವೇ ನಡೆದು ಹಿಂಡಲಗಾದಲ್ಲಿರುವ ಡಾನ್ ಶೆಟ್ಟಿ ಕೂಡಾ ಜೈಲಿನಿಂದ ತಪ್ಪಸಿಕೊಂಡು ಹೋಗುವ ಎಲ್ಲ ಸಾಧ್ತತೆಗಳಿದ್ದವು ಆದರೆ ಬೆಳಗಾವಿ ಪೋಲೀಸರ ಸಮಯಪ್ರದ್ಞೆ ಮತ್ತು ಅವರ ಧೈರ್ಯ ಮತ್ತು ಸಹಾಸದ ಪ್ರಯತ್ನದಿಂದ ದೊಡ್ಡ ಅನಾಹುತ ತಪ್ಪಿದೆ

ಬೆಳಗಾವಿ ಪೋಲೀಸರು ಕಿರಾರಕರನ್ನು ವಿಚಾರಣೆ ನಡೆಸಿ ಹಿಂಡಲಗಾ ಕಾರಾಗೃಹದ ಅಧಿಕಾರಿಗಳು ಇವರ ಜೊತೆ ಕೈಜೋಡಿಸಿದ್ದರಾ ? ಅಥವಾ ಶೆಟ್ಟ ಜೈಲಿನಲ್ಲಿಯೇ ಕುಳಿತುಕೊಂಡು ಪ್ಲ್ಯಾನ್ ಮಾಡಿದ್ದನಾ ಅನ್ನೋದರ ಬಗ್ಗೆ ತನಿಖೆ ಮಾಡುವದು ಅತ್ಯಗತ್ಯ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *