ಕೊರೊನಾ ಕರಿ ನೆರಳು, ಬೆಳಗಾವಿಯ ವಹಿವಾಟು ಇಳಿಮುಖ
ಬೆಳಗಾವಿ-ಕೋರೋನಾ ಸೊಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಸದಾಕಾಲ ಜನದಟ್ಟನೆಯಿಂದ,ರಾರಾರಾಜಿಸುತ್ತಿದ್ದ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಶಾಂತವಾಗಿದೆ
ಇಂದು ಶನಿವಾರ ಬೆಳಗಾವಿಯಲ್ಲಿ ವಾರದ ಸಂತೆಯ ದಿನವಾದರೂ ರವಿವಾರ ಪೇಠೆಯಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು ,ನಗರದ ಯಾವ ಭಾಗದಲ್ಲೂ ಟ್ರಾಫಿಕ್ ಸಮಸ್ಯೆ ಕಾಣಲಿಲ್ಲ ,ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀಧಿ ಮಾಡುವವರು ಬಾರದ ಕಾರಣ ಮಾರುಕಟ್ಟೆಯಲ್ಲಿ ರಾಶಿ,ರಾಶಿ ತರಕಾರಿ ಹಾಗೆ ಉಳಿದುಕೊಂಡಿದೆ
ಮಟನ್ ಮಾರ್ಕೇಟ್,ಪಿಶ್,ಮತ್ತು ಚಿಕನ್ ಮಾರ್ಕೆಟ್ ಸಂಪೂರ್ಣವಾಗಿ ಸ್ತಬ್ಧ ವಾಗವೆ ,ಕುಕಟೋದ್ಯಮ ವಂತೂ ಗ್ರಾಹಕರನ್ನು ಸೆಳೆಯಲು ಕು.ಕು.ಕೂಹ್..ಎಂದು ಕೂಗುವ ಪರಿಸ್ಥಿತಿ ಬಂದಿದೆ
ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಮಕ್ಜಳು ಮೈದಾನಗಳಲ್ಲಿ ಕಾಣಿಸಿಕೊಂಡರು
ಬೆಳಗಾವಿ ಮಹಾನಗರ ಪಾಲಿಕೆ ,ಬೀದಿ ಪಕ್ಕದಲ್ಲಿ ಮಾರುವ ತಿಂಡಿ ತಿನಿಸುಗಳಿಗೆ ಬ್ರೇಕ್ ಹಾಕಿರುವದರಿಂದ ಬೀದಿ ವ್ಯಾಪಾರವೂ ಮಾಯವಾಗಿದೆ ,ನಗರದ ಪಾರ್ಕುಗಳಿಗೆ ,ಬೀಗ ಬಿದ್ದಿದೆ,ಥೇಟರ್ ಗಳ ಬಾಗಿಲು ಮುಚ್ವಿವೆ,ಮಾಲ್ ಗಳು ಶೆಟರ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಈಡೀ ಬೆಳಗಾವಿ ನಗರ ಗದ್ದಲ,ಗಲಾಟೆಗಳಿಂದ ಮುಕ್ತಿ ಪಡೆದಿದೆ
ಕೆಲವು ದ್ವಿಚಕ್ರ ವಾಹನ ಸವಾರರು ತೆಲೆಗೆ ಹೆಲ್ಮೇಟ್ ಹಾಕದಿದ್ದರೂ ಮಾಸ್ಕ ಹಾಕಿಕೊಳ್ಳುವದನ್ನು ಮರೆಯುತ್ತಿಲ್ಲ.
ಕೊರೋನೊ ವೈರಸ್ ಸೋಂಕಿನ ಪ್ರಭಾವದಿಂದಾಗಿ ಪ್ರಮುಖ ವಾಣಿಜ್ಯ ನಗರಿಯಾದ ಬೆಳಗಾವಿ ಸ್ಥಬ್ಧವಾಗಿದೆ. ಗಡಿ ನಗರ ಬೆಳಗಾವಿಗೆ ಮಹಾರಾಷ್ಟ್ರ, ಗೋವಾ ಹಾಗೂ ಆಂದ್ರದಿಂದಲೂ ನಿತ್ಯ ವ್ಯಾಪಾರ ವಹಿವಾಟು ಸಂಪರ್ಕ ಸಾಧಿಸುತ್ತಿದ್ದು, ವೈಸರ್ ಕಾರಣದಿಂದಾಗಿ ನೆರಯ ರಾಜ್ಯಗಳ ವ್ಯಾಪಾರಸ್ಥರ ವ್ಯವಹಾರ ಗಣನೀಯವಾಗಿ ಇಳಿಮುಖ ಕಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪಿಯುಸಿ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನಿಗಾಹಿಸಲಾಗಿದ್ದು, ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಈ ತಿಂಗಳು ಕೊನೆಯ ವರೆಗೆ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಇಂದು ಮತ್ತು ನಾಳೆ ನಡೆಯಬೇಕಾದ ಮುಖ್ಯಮಂತ್ರಿ ಹಾಗೂ ಇತರ ಸಚಿವರ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮದುವೆ ಸಮಾರಂಭಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಕಡಿಮೆಯಾಗಿದ್ದು, ಬೆಲೆ ತೀರ ಇಳಿಮುಖವಾಗಿದೆ.
ಯಾವತ್ತೂ ಜನನಿಭಿಡತೆಯಿಂದ ಗಿಜುಗುಡುತ್ತಿದ್ದ ಬೆಳಗಾವಿ ಪ್ರಮುಖ ಬೀದಿಗಳು ಬಯಲಾಗಿವೆ. ಮಾರುಕಟ್ಟೆಯಲ್ಲಿ ಜನವಿಲ್ಲದೆ ಅಂಗಡಿ ಮುಗ್ಗಟ್ಟುಗಳು ಬಿಕೋ ಎನ್ನುತ್ತಿವೆ. ಕಟ್ಟಿಟ್ಟ ತರಕಾರಿ ಮೂಟೆಗಳಲ್ಲಿ ಹಾಗೇ ಬಿದ್ದಿದೆ. ಖರೀದಿಗೆಂದು ಯಾವುತ್ತೂ ಮಾರುಕಟ್ಟೆಗೆ ಆಗಮಿಸುತ್ತಿದ್ದ ಜನ ಕೊರೋನಾ ಭೀತಿಯಿಂದ ಮನೆ ಸೇರಿದ್ದಾರೆ.
ವಿಧಾನ ಪರಿಷತ್ತ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಿಗಮಠ ಅವರ ಪುತ್ರಿಯ ಮದುವೆಗೆ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ಸಚಿವರ ದಂಡು ಬೆಳಗಾವಿಗೆ ಆಗಮಿಸುತ್ತಿದ್ದರೂ ಅದ್ದೂರಿಯಾಗಿ ನಡಯಬೇಕಾಗಿದ್ದ ಮದುವೆ ಸರಳತೆ ಪಡೆದುಕೊಂಡಿದೆ.
ಮದುವೆಗಾಗಿ ಬೆಳಗಾವಿ ಸಿಪಿಎಡ್ ಮೈದಾನ,ಮತ್ತು ಚಿಕ್ಕೋಡಿಯಲ್ಲಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ಗಳನ್ನು ತೆರವು ಮಾಡಲಾಗುತ್ತಿದ್ದು ಮದುವೆ ಕಾರ್ಯಕ್ರಮ ಬೆಳಗಾವಿಯ ಶಗುನ್ ಗಾರ್ಡನ್ ದಲ್ಲಿ ಸರಳವಾಗಿ ನಡೆಯುತ್ತದೆ.
ಕೊರೊನಾ ವೈರಸ್ ಸೋಂಕಿನಿಂದಾಗಿ ಬೆಳಗಾವಿಯಲ್ಲಿ ಜಿಲ್ಲಾ ಆಡಳಿತ ಮುನ್ನಚ್ಚರಿಕೆ ವಹಿಸಿದ್ದು, ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾಕ್ಟರ್ ಎಸ್.ಬಿ. ಬೊಮ್ಮನಹಳ್ಳಿ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೂಕ್ತ ಕ್ರಮಕ್ಕೆ ಜವಾದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದಾರೆ.
ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದವರ ಮೇಲೆ ನಿರದಾಕ್ಷಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ಅನಾಹಿತವಾಗದಂತೆ ನಿಗಾವಹಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾ ವಹಿಸಲಾಗಿದ್ದು, ಸುಳ್ಳು ಸುದ್ಧಿ ಹರಡಿವುವರ ಮೇಲೆ ಕಾನೂನುರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.