ಬೆಳಗಾವಿ- ನಗರದ ರಿಯಲ್ ಇಸ್ಟೇಟ ಉದ್ಯಮಿಗಳಿಗೆ ೧೧೦ ಕೋಟಿ ರೂ ಗಳ ಮಕ್ಮಲ್ ಟೋಪಿ ಹಾಕಿದ್ದ ಝುಲ್ಫಿ ಖತೀಬನ ಅಪಹರಣ ಮಾಡಿರುವ ಆರೋಪದ ಮೇಲೆ ಇಬ್ಬರು ನಗರ ಸೇವಕರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿಯ ಮೇಲೆ ಮಾರ್ಕೇಟ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ
ಝುಲ್ಫಿ ಖತೀಬನನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ನಗರ ಸೇವಕ ಮತೀನ ಅಲಿ ಶೇಖ,ಅಕ್ರಂ ಬಾಳೆಕುಂದ್ರಿ ಮತ್ತು ರಿಯಲ್ ಇಸ್ಟೇಟ ಉದ್ಯಮಿ ಮೇಂಡಾ ಇಮ್ರಾನ್ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಝುಲ್ಫಿ ಖತೀಬ ಎಂಬಾತ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಇಬ್ಬರು ನಗರ ಸೇವಕರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿ ಸೇರಿಕೊಂಡು ಅಪಹರಣ ಮಾಡಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಝುಲ್ಫಿ ಆರೋಪಿಸಿ ಮೂವರ ವಿರುದ್ಧ ದೂರು ನೀಡಿದ್ದಾನೆ
ನಿನ್ನೆ ಅಷ್ಟೆ ನಗರ ಸೇವಕಿ ಮೀನಾಬಾಯಿ ಚೌಗಲೆ ವಿರುದ್ಧ ಬೂ ಕಬಳಿಕೆಯ ಆರೋಪದ ಮೇಲೆ 420 ಕೇಸ್ ದಾಖಲಾಗಿತ್ತು ಇವತ್ತು ಮತ್ತೆ ಇಬ್ಬರು ನಗರ ಸೇವಕರ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಗಿದ್ದು ಪೋಲೀಸರು ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ