ಬೆಳಗಾವಿ-ಕೊಡಗು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯತಲ್ಲಣ ಗೊಂಡಿದೆ.ಬೆಳಗಾವಿ ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಪಾಲಿಕೆಗೆ ಬರಬೇಕಾದ ನೂರು ಕೋಟಿ ಅನುದಾನ ಬಂದಿಲ್ಲ.ಇದ್ಯಾವುದರ ಬಗ್ಗೆಯೂ ತೆಲೆಕೆಡಿಸಿಕೊಳ್ಳದ ಬೆಳಗಾವಿಯ ನಗರಸೇವಕರು ಶಿಮ್ಲಾಗೆ ಹಾರಿದ್ದಾರೆ.
ಶಿಮ್ಲಾ ನಗರ ಸೇವಕರು ಇತ್ತೀಚಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದರು ಇಲ್ಲಿಯ ವ್ಯೆವಸ್ಥೆಯ ಕುರಿತು ಅದ್ಯಯನ ಮಾಡಿ ಬೆಳಗಾವಿ ನಗರ ಸೇವಕರಿಗೆ ಶಿಮ್ಲಾ ಟೋಪಿ ಹಾಕಿ ಸತ್ಕರಿಸಿ ನೀವೂ ಶಿಮ್ಲಾಗೆ ಬನ್ನೀ ಎಂದು ಅಹ್ವಾನ ಕೊಡುವದಷ್ಟೇ ತಡ ಮೇಯರ್ ಚಿಕ್ಕಲದಿನ್ನಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಿದ್ದರು
ಎರಡು VRL ಬಸ್ ಬುಕ್ಕ್ ಮಾಡಿ 45 ಕ್ಕೂಹೆಚ್ಚು ನಗರ ಸೇವಕರು ಮುಂಬೈಗೆ ಪ್ರಯಾಣ ಬೆಳೆಸಿದ್ದು ಮುಂಬೈಯಿಂದ ವಿಮಾನ ಹತ್ತಿ ಶಿಮ್ಲಾ ತಲುಪಲಿದ್ದಾರೆ.
ಶಿಮ್ಲಾಗೆ ಮುಟ್ಟಿರುವ ಬೆಳಗಾವಿಯ ಮೇಯರ್ ಚಿಕ್ಕಲದಿನ್ನಿ.ಉಪಮೇಯರ್ ಹಾಗು 45 ಕ್ಕೂ ಹೆಚ್ಚು ನಗರ ಸೇವಕರು ಶಿಮ್ಲಾ ಮಹಾನಗರ ಪಾಲಿಕೆಯ ಕಾರ್ಯವೈಖರಿ ಕುರಿತು ಅದ್ಯಯನ ಮಾಡಲಿದ್ದಾರೆ.
ಕಳೆದ ವರ್ಷ ಚಂದೀಘಡ ಕ್ಕೆ ಸ್ಟಡಿ ಟೂರ್ ಗೆ ಹೋಗಿದ್ದ ಇದೇ ನಗರ ಸೇವಕರು ಮಾಡಿದ್ದೇನು ಸ್ಟಡಿ ಟೂರ್ ಹೆಸರಿನಲ್ಲಿ ಮಜಾ ಮಾಡೋದು ಬೇಡ,ಪಾಲಿಕೆ ಹಣ ದುಂದು ವೆಚ್ಚ ಮಾಡಬೇಡಿ ಎಂದು ನಗರ ಸೇವಕಿ ಸರಳಾ ಹೇರೇಕರ್ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವಾಜ್ ಹಾಕಿದ್ದರು
ಬೆಳಗಾವಿಯ ರಸ್ತೆಗಳು ಹಾಳಾಗಿ ಇಲ್ಲಿಯ ಜನ ಪಡಬಾರದ ಕಷ್ಟ ಅನುಭವಿಸುತ್ತಿದ್ದು ಬೆಳಗಾವಿ ನಗರ ಸೇವಕರು ಶಿಮ್ಲಾಗೆ ಹಾರಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ