ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಡೆಪ್ಯುಟಿ ಮೇಯರ್,ಹಾಗು ಪಾಲಿಕೆ ಆಯುಕ್ತರಿಗೆ ಹೊಸ ಹುಂದಾಯಿ ಕಂಪನಿಯ ಮೂರು ಕಾರುಗಳನ್ನು ಖರೀದಿಸಲು ಪಾಲಿಕೆ ಹಣ ಪಾವತಿ ಮಾಡಿದ್ದು ವಾರದಲ್ಲಿ ಮೂರು ಹೊಸ ವೇರಣಾ ಕಾರುಗಳು ಪಾಲಿಕೆ ಆವರಣದಲ್ಲಿ ರಾರಾಜಿಸಲಿವೆ
ಒಂದು ವೇರಣಾ ಕಾರಿನ ಬೆಲೆ ೬ ಲಕ್ಷ ೭೮ ಸಾವಿರವಿದ್ದು ಮೂರು ಕಾರಿನ ಮೊತ್ವನ್ನು ಕಂಪನಿಯ ಏಜನ್ಸಿಗೆ ಪಾವತಿ ಮಾಡಲಾಗಿದೆ ಮೇಯರ್ ಸರೀತಾ ಪಾಟೀಲ ಅವರು ಹೊಸ ವಾಹನ ನೀಡುವಂತೆ ಆಗ್ರಹಿಸಿ ಅಂಬ್ಯಾಸಿಡರ್ ಕಾರು ಬಿಟ್ಟು ಬೈಕ್ ಮೇಲೆ ಪಾಲಿಕೆಗೆ ಬಂದು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದರು
ಉಪ ಮೇಯರ್ ಸಂಜಯ ಶಿಂಧೆ ಅವರು ಪಾಲಿಕೆ ಯ ಅಂಬ್ಯಾಸೀಡರ್ ವಾಹನ ಬಿಟ್ಟು ಕಳೆದ ಏಳು ತಂಗಳಿನಿಂದ ತಮ್ಮ ಖಾಸಗಿ ವಾಹನದಲ್ಲಿಯೇ ಪಾಲಿಕೆಗೆ ಬರುತ್ತಿದ್ದರು ಈಗ ಪಾಲಿಕೆಯ ತ್ರೀಮೂರ್ತಿಗಳಿಗೆ ಮೂರು ಹೊಸ ಕಾರುಗಳು ಬರಲಿವೆ
ಫೆ ಹತ್ತರಂದು ಚೆನ್ನೈ ದಿಂದ ಈ ಮೀರು ವಾಹನಗಳು ಬೆಳಗಾವಿಯತ್ತ ಹೊರಡಲಿದ್ದು ಒಂದು ವಾರದಲ್ಲಿ ಮೇಯರ್ ಉಪಮೇಯರ್ ಮತ್ತು ಕಮಿಷ್ನರ್ ಅವರು ವೇರಣಾ ಕಾರಿನಲ್ಲಿ ನಗರ ಸಂಚಾರ ಮಾಡಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ