ಬೆಳಗಾವಿ- ಕರ್ನಾಟಕ ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಸರ್ಕಾರದ ವಾಹನದಲ್ಲೇ ಸುತ್ತಾಡಿ ಸರ್ಕಾರದ ವಿರುದ್ದವೇ ಬೆಂಕಿ ಉಗಳುವ ಬೆಳಗಾವಿಯ ಗದ್ದಾರ್ ಮೇಯರ್ ಗೆ ಪಾಲಿಕೆ ಅಧಿಕಾರಿಗಳು ಹೈಟೆಕ್ ಕಚೇರಿಯನ್ನು ಗಿಪ್ಟ ಕೊಟ್ಟಿದ್ದಾರೆ
ಮೇಯರ್ ಸಂಜೋತಾ ಬಾಂಧೇಕರ ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಪುಂಡಾಟಿಕೆ ಪ್ರದರ್ಶಿಸಿದ್ದರು ಅದಲ್ಲದೆ ಶಿವಸೇನೆಯ ಯದ್ಧವ ಠಾಕ್ರೆ ಅವರನ್ನು ಭೇಟಿಯಾಗಿ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ ಬೇಗನೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ನಾಡಿನ ವಿರುದ್ಧ ಪಿತೂರಿ ಮಾಡಿದ್ದ ದ್ರೋಹಿ ಮೇಯರ್ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಇದೇ ನಾಡದ್ರೋಹಿಯ ಚೇಂಬರ್ ಹೈಟೆಕ್ ಮಾಡಲು ಬರೊಬ್ಬರಿ ಇಪ್ಪತ್ತು ಲಕ್ಷ ರೂ ಖರ್ಚು ಮಾಡಿದೆ
ಕನ್ನಡಪರ ಸಂಘಟನೆಗಳು ಮೇಯರ್ ವಿರುದ್ದ ಕ್ರಮ ಕೈಗೊಳ್ಳಿ ಮೇಯರ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಮೇಯರ್ ಗೆ ನೀಡಲಾಗಿರುವ ಸರ್ಕಾರಿ ಸವಲತ್ತುಗಳನ್ನು ಕಸಿದುಕೊಳ್ಳಿ ಎಂದು ಹೋರಾಟ ಮಾಡಿದ್ರೂ ಸರ್ಕಾರ ಕ್ರಮ ಕೈಗೊಳ್ಳದೇ ಕನ್ನಡಿಗರ ಒತ್ತಾಯಕ್ಕೆ ಮಣಿಯದೇ ಸರ್ಕಾರ ಎಂಈಎಸ್ ಗೆ ಹೆಗಲ ಮೇಲೆ ಕೂರಿಸಿಕೊಂಡು ಕನ್ನಡಿಗರನ್ನು ಅವಮಾನ ಮಾಡಿದೆ
ನಾಡದ್ರೋಹಿಯ ಮೇಯರ್ ಮಾಡರ್ನ ಮಾಡಲು ಪಾಲಿಕೆಯ 20 ಲಕ್ಷ ರೂ ಅನುದಾನ ಖರ್ಚು ಮಾಡಿ ಹೊಸ ಖುರ್ಚಿ ಹೊಸ ಟೇಬಲ್ ಹೈಟೆಕ್ ಚೇಂಬರ್ ಹೈಟೆಕ್ ಮಿಟಿಂಗ್ ಹಾಲ್ ಹೈಟೆಕ್ ಆ್ಯಂಟಿ ಚೇಂಬರ್ ವ್ಯೆವಸ್ಥೆ ಮಾಡಿಕೊಟ್ಟಿದೆ
ಕರ್ನಾಟಕದಲ್ಲಿ ಕರ್ನಾಟಕದ ವಿರುದ್ದವೇ ಬೆಂಕಿ ಉಗಳುವ ದ್ರೋಹಿಗಳಿಗೆ ನಮ್ಮ ಸರ್ಕಾರ ಯಾವ ರೀತಿ ಪೋಲ್ಮೀ ಮಾಡತೈತಿ ನೋಡ್ರಪ್ಪ ಇದು ನಮ್ಮ ಕನ್ನಡ ಸರ್ಕಾರದ ಸ್ಪೇಶ್ಯಾಲಿಟಿ…