ಬೆಳಗಾವಿ-
ದಲಿತ ನಗರಸೇವಕನಿಗೆ ಅನ್ಯಾಯ
ಬಜೆಟ್ ಮೀಟಿಂಗ್ ಪ್ರಾರಂಭ ವಾಗುತ್ತಿದ್ದಂತೆ ಆರಂಭದಲ್ಲಿ ಕರೆಂಟ್ ಶಾಕ್ ನೀಡಿತು ಕರೆಂಟ್ ಬಂದ ನಂತರ ನಗರ ಸೇವಕ ಚಿಕ್ಕಲದಿನ್ನಿ ಶಾಕ್ ನೀಡಿದರು
ಬಜೆಟ್ ಮಂಡನೆಗೆ ಮಹಾಪೌರರು ಆದೇಶಿಸುತ್ತಿದಂತೆ ಮದ್ಯ ಪ್ರವೇಶಿಸಿದ ನಗರ ಸೇವಕ ಚಿಕ್ಕಲದಿನ್ನಿ ಮಾತನಾಡಿ ಶಾಸಕ ಫಿರೋಜ್ ಸೇಠ ತಮ್ಮ ವಾರ್ಡಿನಲ್ಲಿ ನೂರು ಕೋಟಿ ಅನುದಾನದ ಕಶಮಗಾರಿಗಳನ್ನು ಬಸವ ಕಾಲೋನಿಯಲ್ಲಿ ಪೂಜೆ ನೆರವೇರಿಸುವಾಗ ಸೇಠ ಅವರು ತಮಗೆ ಆಮಂತ್ಣಣ ನೀಡಿಲ್ಲ ದಲಿತ ನಗರ ಸೇವಕನಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದಾಗ ಕನ್ನಡ ನಗರ ಸೇವಕರು ಅದಕ್ಕೆ ಧವನಿಗೂಡಿಸಿದರು
ವಿರೋಧ ಗುಂಪಿನ ನಾಯಕ ರವಿ ಧೋತ್ರೆ,ದೀಪಕ ಜಮಖಂಡಿ ಹಾಗು ರಮೇಶ ಸೊಂಟಕ್ಕಿ ಮಾತನಾಡಿ ಪಾಲಿಕೆಯ ನೂರು ಕೋಟಿ ವಿಶೇಷ ಅನುದಾನದ ಕಾಮಗಾರಿ ಆರಂಭಿಸುವಾಗ ಜಿಲ್ಲಾ ಮಂತ್ರಿಗಳಿಗೂ ಆಮಂತ್ಣಣ ನೀಡುತ್ತಿಲ್ಲ ಈ ವಿಷಯದಲ್ಲಿ ನಗರ ಸೇವಕರಿಗೆ ಅನ್ಯಾಯವಾಗುತ್ತದೆ ಈ ಕುರಿತು ಅಧಿಕಾರಿಗಳ ವಿರುಧ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಪಂಡರಿ ಪರಬ ಮಾತನಾಡಿ ನೂರು ಕೋಟಿ ವಿಶೇಷ ಅನುದಾನದ ಹಂಚಿಕೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ಕ್ಕೆ ಮತ್ತು ಕ್ಷೇತ್ರದ ನಗರ ಸೇವಕರಿಗೆ ಅನ್ಯಾಯವಾಗಿದೆ ಈ ಕುರಿತು ಕ್ರಮ ಜರುಗಿಸಬೇಕು ಎಂದರು
ಮಹಾಪೌರ ಸರೀತಾ ಪಾಟೀಲ ಮಾತನಾಡಿ ನೂರು ಕೋಟಿ ಅನುದಾನದ ಕಾಮಗಾರಿ ಆರಂಭಿಸುವಾಗ ತಮಗೂ ಆಮಂತ್ಣಣ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಮೀತಿಯ ಅಧ್ಯಕ್ರರಾಗಿದ್ದು ಶೀಘ್ರದಲ್ಲಿಯೇ ಸಚಿವರ ಬಳಿ ನಿಯೋಗ ಕೊಂಡೊಯ್ದು ದೂರು ನೀಡಲು ನಿರ್ಧರಿಸಲಾಯಿತು
ಪಾಲಿಕೆಯಲ್ಲಿ ಮೊದಲ ಬಾರಿಗೆ ನಗರ ಸೇವಕರು ಶಾಸಕ ಸೇಠ ವಿರುದ್ಧ ಪ್ರತಿಭಟಿಸಿದ್ದು ವಿಶೇಷವಾಗಿತ್ತು ಶಾಸಕರ ಏಕಪಕ್ಷೀಯ ಧೋರಣೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಮೇಶ ಜಾರಕಿಹೊಳಿ ಅವರಗೆ ಪಾಲಿಕೆಯ ನಿಯೋಗ ದೂರು ಸಲ್ಲಿಸಲಿದೆ