ಬೆಳಗಾವಿ- ಬೆಳಗಾವಿ ಪಾಲಿಕೆ ಚುನಾವಣೆ ವಿಚಾರ ಕುರಿತು ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ,ಬೆಳಗಾವಿ ಪಾಲಿಕೆ ಗೆ ಬಿಜೆಪಿ ಯಿಂದ ಅಭ್ಯರ್ಥಿಗಳು ಕಣಕ್ಕೆ ಇಳಸ್ತೀವಿ,ನಮ್ಮ ಪಕ್ಷದಿಂದ ಅಭ್ಯರ್ಥಿಗಳ ನ್ನ ಖಂಡಿತವಾಗಿ ನಿಲ್ಲಿಸುತ್ತೇವೆ,ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತಿವಿ. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಮೇಯರ್ , ಮಾಡ್ತಿವಿ ಎಂದು ಸಚಿವ ಭೈರತಿ ಬಸವರಾಜ ಬೆಳಗಾವಿಯಲ್ಲೇ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸದ್ಯ ಇರುವ ಖಾತೆಯಿಂದ ನನಗೆ ತುಂಬಾ ತೃಪ್ತಿಯಿದೆ.ಈ ಖಾತೆಯಿಂದ ಬಡವರಿಗೆ ಕೆಲಸ ಮಾಡಿ ಕೊಡಬಹುದು.ಈ ಕೆಲಸ ನನಗೆ ನೆಮ್ಮದಿ ತಂದುಕೊಟ್ಟಿದೆ.ಮುಖ್ಯಮಂತ್ರಿ ಗಳು ನನಗೆ ತುಂಬಾ ಸಹಕಾರ ಕೊಟ್ಟಿದ್ದಾರೆ, ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರ.ಸಿಎಂ ಸಂಕ್ರಾಂತಿ ಆದ ಮೇಲೆ ಸಂಪುಟ ವಿಸ್ತರಣೆ ಮಾಡ್ತಾರೆ ಅಂತಾ ಹೇಳಿದ್ದಾರೆ. ಅದು ಸಿಎಂ ಯಡಿಯೂರಪ್ಪ ಅವರ ವಿವೇಚನೆ ಗೆ ಬಿಟ್ಟದ್ದು.
ಸಿಎಂ ಯಡಿಯೂರಪ್ಪ ಯಾವಾಗ ಬೇಕಾದರೂ ತೀರ್ಮಾನ ಮಾಡಬಹುದು. ಸಿಎಂ ತೀರ್ಮಾನ ಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ಸಚಿವರು ಹೇಳಿದರು.
ನಮ್ಮ ಜೊತೆಗೆ ಬಂದ ಶಂಕರ, ಎಂಟಿಬಿ ನಾಗರಾಜ್, ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡ್ತಿವಿ ಅಂತಾ ಸಿಎಂ ಹೇಳಿದ್ದಾರೆ.ನಮಗೆ ಸಿಎಂ ಸಕಾರಾತ್ಮಕ ಸ್ಪಂದಿಸಿದ್ದಾರೆ. ಯಾವುದೇ ನೆಗ್ಲೆಟ್ ಮಾಡಿಲ್ಲ.
ಸಿಎಂ ಯಡಿಯೂರಪ್ಪ ಅವರ ಮೇಲೆ ಸಂಪೂರ್ಣ ನಂಬಿಕೆ ಇದೇ. ಸಿಪಿ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ವಿವೇಚನೆ ಗೆ ಬಿಟ್ಟಿರುವುದು.
ಬಿಜೆಪಿ ಗೆ ಹೋದವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಾರೆ ಎಂದು ಡಿಕೆಶಿ ಹೇಳಿಕೆ ವಿಚಾರ.ಎಲ್ಲೋ ಡಿಕೆಶಿ ಕನಸು ಕಾಣುತ್ತಿದ್ದಾರೆ.ಯಾವ ಕಾರಣ ಪಕ್ಷ ಚೇಂಜ್ ಮಾಡುವುದಾಗಲಿ ಸಾಧ್ಯವಿಲ್ಲ.ನಾವು ಬಿಜೆಪಿ ಪಕ್ಷದಲ್ಲಿ ಇದ್ದೇವೆ. ಬಿಜೆಪಿ ಚಿನ್ಹೆ ಮೇಲೆ ಗೆದ್ದಿದ್ದೇವೆ. ಮುಂದೆಯು ಕೂಡಾ ಬಿಜೆಪಿ ಪಕ್ಷದ ಅಡಿಯಲ್ಲಿ ಸ್ಪರ್ಧೆ ಮಾಡುತ್ತೇವೆ.
ಬಿಜೆಪಿಯಿಂದ ಗೆದ್ದು , 150 ಸೀಟುಗಳಿಂದ ಬಿಜೆಪಿ ಸರ್ಕಾರ ಮಾಡುತ್ತೇವೆ.ಎಂದರು
ಬೆಳಗಾವಿ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಾಟ ವಿಚಾರ.ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ಧಾರ ಮಾಡಲಿದೆ.ಪಾಲಿಕೆ ಮುಂದಿನ ಕನ್ನಡ ಧ್ವಜದ ಬಗ್ಗೆ ಪ್ರತಿಕ್ರಿಯೆ ಮಾಡುವುದಿಲ್ಲ.ನಾಳೆ ಸಭೆಯಲ್ಲಿ ಡಿಸಿ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಹೇಳುವೆ. ಸಿಎಂ ಬದಲಾವಣೆ ಆಗುತ್ತೆ ಸಿದ್ದರಾಮಯ್ಯ ಹೇಳಿಕೆ ವಿಚಾರ.
ಸಿಎಂ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ.
ಸಿಎಂ ಬದಲಾವಣೆ ಪ್ರಶ್ನೆ ಇಲ್ಲ.ಈ ನಡುವೆ ಸಿದ್ದರಾಮಯ್ಯ ನವರು ಜ್ಯೋತಿಷ್ಯ ಆಗಿದ್ದಾರೋ ನನಗು ಗೊತ್ತಿಲ್ಲ.ಸಿದ್ದರಾಮಯ್ಯನಿಗೆ ಏನು ಕನಸು ಬಿಳ್ತಾಯಿದೆಯಾ ಅನ್ನೋದು ನನಗೆ ಗೊತ್ತಿಲ್ಲ.
ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ಆದ್ರೆ ಇದು ಸತ್ಯಕ್ಕೆ ದೂರವಾದ ಸಂಗತಿ.
ಸಿಎಂ ಯಡಿಯೂರಪ್ಪ ಎರಡುವರೆ ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.