Breaking News

ಬೆಳಗಾವಿ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಜಂಟಿ ಸೂತ್ರ..

ಬೆಳಗಾವಿ- ಬೆಳಗಾವಿ ನಗರದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು ಈ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಿಸಲು ಮುಂದಾಗಿದ್ದು ಮಹಾಪೌರ ಸರೀತಾ ಪಾಟೀಲ ಶುಕ್ರವಾರ ಪಾಲಿಕೆ,ಕಾಂಟೋನ್ಮೆಂಟ್,ಪೋಲೀಸ್ ಇಲಾಖೆ,ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಭೆ ಕರೆದು ಪರಾಮರ್ಶೆ ನಡೆಸಿತು

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಪಿ ಅಮರನಾಥ ರೆಡ್ಡಿ ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಬೇಕಾದರೆ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಅಗತ್ಯವಾಗಿದೆ ಈಗ ತುರ್ತಾಗಿ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಅವ್ಯಾಹತವಾಗಿರುವ ಬೀದಿ ವ್ಯಾಪಾರಿಗಳನ್ನು ನಿಯಂತ್ರಿಸಬೇಕಾಗಿದೆ ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಿ white line ಮಾರ್ಕಿಂಗ್ ಮಾಡಬೇಕು ಎಂದು ಸಲಹೆ ನೀಡಿದರು

ಟ್ರಾಫಿಕ್ ಎಸಿಪಿ ಶಂಕರ ಮಾರಿಹಾಳ ಮಾತನಾಡಿ ನಗರದ ಶಾಪಿಂಗ್ ಕಾಂಪ್ಲೆಕ್ಸಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಬೇಸ್ ಮೇಟ್ ಜಾಗವನ್ನು ಪಾರ್ಕಿಂಗ್ ಗೆ ಬಳಕೆಯಾದರೆ ಟ್ರಾಫಿಕ್ ಸಮಸ್ಯೆಯನ್ನು ತುರ್ತಾಗಿ ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟರು

ಸಭೆಯಲ್ಲಿ ನಗರ ಸಾರಿಗೆ ಬಸ್ ಗಳನ್ನು ಬಸ್ ಚಾಲಕರು ಮನ ಬಂದಂತೆ ರಸ್ತೆಗಳ ಮದ್ಯ ನಿಲ್ಲಿಸುತ್ತಾರೆ ಇದನ್ನು ತಡೆಯಬೇಕು ಬಸ್ ಗಳು ನಿಗದಿತ ಸ್ಥಳಗಳಲ್ಲಿ ನಿಲ್ಲಬೇಕು ಎಂದು ಸಭೆಯಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು

ಸ್ಮಾರ್ಟ ಸಿಟಿ ಸಿಇಓ ಮಾತನಾಡಿ ಸ್ಮಾರ್ಟ ಸಿಟಿ ಯೋಜನೆಯಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು ಎಂದರು

ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತನಾಡಿ ನಗರದಲ್ಲಿ ಬಸ್ ಗಳ ಓಡಾಟದ ಸಂಖ್ಯೆ ಹೆಚ್ಚಾಗಿದೆ ನಗರದ ರೆಲ್ವೆ ನಿಲ್ಧಾಣದ ಬಳಿ ಇನ್ನೊಂದು ನಗರ ಸಾರಿಗೆಯ ಬಸ್ ಟರ್ಮಿನಲ್ ನಿರ್ಮಾಣದ ಅಗತ್ಯವಿದ್ದು ಕಾಂಟೋನ್ಮೆಂಟ್ ಅಧಿಕಾರಿಗಳು ಇದಕ್ಕೆ ಜಾಗ ನೀಡಬೇಕು ಎಂದು ಒತ್ತಾಯಿಸಿದಾಗ ಕಾಂಟೋನ್ಮೆಂಟ್ ಸಿಇಓ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಜಾಗೆ ಬೇಕು ಎಂದು ಅರ್ಜಿ ಹಾಕಿ ಕುಳಿತುಕೊಳ್ಳಬೇಡಿ ಫಾಲೋಅಪ್ ಮಾಡಿ ನಾವು ಜಾಗೆ ನೀಡುತ್ತೇವೆ ಎಂದರು

ಸಭೆಯಲ್ಲಿ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಜಂಟಿ ಸೂತ್ರ ಕಂಡು ಹಿಡಿಯುವ ನಿರ್ಧಾರ ಕೈಗೊಳ್ಳಲಾಯಿತು

ಪಾಲಿಕೆ ಆಯುಕ್ತ ಶಶಿಧರ ಕುರೇರ ಬುಡಾ ಆಯುಕ್ತರು ಸೇರಿದಂತೆ ಹಲವಾರು ಜನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *