ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಶುಕ್ರವಾರ ಸಂಜೆ ನಗರದಲ್ಲಿರುವ ಹೋಲ್ ಸೇಲ್ ಪ್ಲಾಸ್ಟಿಕ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು ಆರು ಕ್ವಿಂಟಲ್ ಪ್ಲಾಸ್ಟಿಕ ವಶಪಡಿಸಿಕೊಂಡಿದ್ದಾರೆ
ಪಾಲಿಕೆಯ ಆರೋಗ್ಯಾಧಿಕಾರಿ ನಾಡಗೌಡ,ಪರಿಸರ ಅಭಿಯಂತರ ಯದಯಕುಮಾರ ಸೇರಿದಂತೆ ಪಾಲಿಕೆಯ ತಂಡ ಆಯುಕ್ತ ಶಶಿಧರ ಕುರೇರ ಅವರ ನೇತ್ರತ್ವದಲ್ಲಿ ಗಣಪತಿ ಗಲ್ಲಿ, ಮಾರುತಿ ಗಲ್ಲಿ ,ಖಡೇಬಝಾರ ಮಾರುತಿ ಗಲ್ಲಿ ರವಿವಾರ ಪೇಠೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ ವಶಪಡಿಸಿಕೊಳ್ಳಲಾಯಿತು
ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ನಗರದಲ್ಲಿ ಎಲ್ಲ ರೀತಿಯ ಪ್ಲಾಸ್ಟಿಕ ನಿಷೇಧ ಮಾಡಲಾಗಿದೆ ಕೆಲವು ಅಂಗಡಿಕಾರರು ಪ್ಲಾಸ್ಟಿಕ ಮಾರಾಟ ಮಾಡುತ್ತಿದ್ದು ಇನ್ನು ಮುಂದೆ ಮತ್ತೆ ಪ್ಲಾಸ್ಡಿಕ ಮಾರಾಟ ಮಾಡಿದರೆ ದಂಡ ವಸೂಲಿ ಮಾಡುವದರ ಜೊತೆಗೆ ಅಂಗಡಿಕಾರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದು ಪ್ಲಾಸ್ಟಿಕ ಬಳಕೆ ನಿಷೇಧ ಮಾಡಲು ಪಾಲಿಕೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ