ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸೂಪರ್ ಸೀಡ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದೊಡ್ಡ ನಾಟಕವೇ ನಡೆಯಿತು ಸರ್ರನೇ ಸಭೆಗೆ ಬಂದ ಮಹಾಪೌರ ಸರೀತಾ ಪಾಟೀಲ ಆಸ್ತಿ ತೆರಿಗೆ ಹೆಚ್ಚಿಸುವ ರೂಲಿಂಗ ಕೊಟ್ಟು ಭರ್ರನೇ ಸಭೆ ಮುಗಿಸಿದ ಘಟನೆ ನಡೆಯಿತು
ಸಭೆ ಆರಂಭ ವಾಗುತ್ರದ್ದಂತೇಯೇ ನಗರ ಸೇವಕ ರಮೇಶ ಸೊಂಟಕ್ಕಿ ಮಾತನಾಡಿ ಮಹಾಪೌರರಿಗೆ ಸಭೆ ನಡೆಸುವ ನೈತಿಕ ಹಕ್ಕಿಲ್ಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮೇಯರ್ ಬೆಳಗಾವಿಯ ಜನ ತೆಲೆ ತಗ್ಗಿಸುವಂತೆ ಮಾಡಿದ್ದಾರೆ ಅವರು ತಕ್ಷಣ ರಾಜಿನಾಮೆ ಕೊಡಬೇಕು ಎಂದು ಒತ್ತಾಯಿಸಿದಾಗ ಅದಕ್ಕೆ ನಗರ ಸೇವಕ ದೀಪಕ ಜಮಖಂಡಿ ಧ್ವನಿಗೂಡಿಸಿದರು ಅಷ್ಟಕ್ಕೆ ಕನ್ನಡ ನಗರ ಸೇವಕರ ಆಕ್ರೋಶ ತಣ್ಣಗಾಯಿತು
ಇದಾದ ಬಳಿಕ ಪೂರ್ವ ನಿಯೋಜಿತ ಎನ್ನುವಂತೆ ಕೆಲವರು ಆಸ್ತಿ ತೆರಿಗೆ ಹೆಚ್ಚುಸುವ ಕುರಿತು ಮಾತನಾಡಿದರು ಇದಾದ ಬಳಿಕ ಮೇಯರ್ ಸರೀತಾ ಪಾಟೀಲ ಬರೆದುಕೊಂಡು ಬಂದಿದ್ದ ಮೂರು ಪುಟದ ಭಾಷಣ ಮಾಡಿ ಆಸ್ತಿ ತೆರಿಗೆ ಶೇ ೧೫ ರಷ್ಟು ಹೆಚ್ಚಿಸುವ ರೂಲಿಂಗ ಕೊಟ್ಡು ಸಭೆಯನ್ನು ಅನಿರ್ಧಿಷ್ಡ ಕಾಲದವರೆಗೆ ಮೂಂದೂಡಿ ಸಭೆಯಿಂದ ನಿರ್ಗಮಿಸಿದರು
ಮೇಯರ್ ರೂಲಿಂಗ ಕೊಡುವವರೆಗೂ ಸುಮ್ಮನೇ ಕುಳಿತ್ತದ್ದ ಕನ್ನಡ ನಗರ ಸೇವಕರು ಮೇಯರ್ ಸಭೆಯಿಂದ ನಿರ್ಗಮಿಸುತ್ತದ್ದಂತೇಯೇ ರಂಪಾಟ ಶುರು ಮಾಡಿದರು ಮೇಯರ್ ರಾಜಿನಾಮೆ ಕೊಡಬೇಕು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿರುವ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಯಿಸಿ ಕೌನ್ಸಿಲ್ ಹಾಲ್ ನಲ್ಲಿಯೇ ಪ್ರತಿಭಟನೆ ಆರಂಬಿಸಿದರು
ಮೇಯರ್ ಸರೀತಾ ಕಾರು ಹತ್ತಲು ಕಚೇರಿಯಿಂದ ಹೊರ ಬರುತ್ತದ್ದಂತೇಯೇ ಕನ್ನಡ ಹಾಗು ಉರ್ದು ಭಾಷಿಕ ನಗರ ಸೇವಕರು ಮೇಯರ್ ಕಾರು ತಡೆದು ಕಾರಿನ ಮುಂದೆ ಪ್ರತಿಭಟಿಸಿ ಮೇಯರ್ ವಿರುದ್ಧ ದಿಕ್ಕಾರದ ಘೋಷನೆ ಕೂಗಿದರು
ಕಾರಿನಿಂದ ಇಳಿದು ಮೇಯರ್ ಸರೀತಾ ಮತ್ತೆ ತಮ್ಮ ಚೇಂಬರ್ ಗೆ ತೆರಳಿದರು ಮೇಯರ್ ಚೇಂಬರ್ ಗೆ ಮುತ್ತಿಗೆ ಹಾಕಿದ ಕನ್ನಡ ನಗರ ಸೇವಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು
ಮೇಯರ್ ಸ್ಪಷ್ಟೀಕರಣ ಕೊಡಬೇಕು ಎಂದು ಪಟ್ಡು ಹಿಡಿದಾಗ ಮೇಯರ್ ಸರೀತಾ ಪಾಟೀಲ ಹೊರಗೆ ಬಂದು ಸರ್ಕಾರ ನೋಟೀಸ್ ಕೊಟ್ಟಿದೆ ಅದಕ್ಕೆ ಎರಡು ದಿನದಲ್ಲಿ ಉತ್ತರ ಕೊಡುತ್ತೇನೆ ಉತ್ತರದ ಪ್ರತಿಯನ್ನು ನಿಮಗೂ ತಲುಪಿಸುತ್ತೇನೆ ಎಂದು ಉತ್ತರ ಕೊಟ್ಟು ಪಾಲಿಕೆಯಿಂದ ನಿರ್ಗಮಿಸಿದರು
ಒಟ್ಟಾರೆ ಪಾಲಿಕೆಯಲ್ಲಿ ಬುಧವಾರ ಸೂಪರ್ ಸೀಡ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸೂಪರ್ ಡೂಪರ್ ನಾಟಕೀಯ ಪ್ರಹಸನ ನಡೆಯಿತು ಖುರ್ಚಿ ಉಳಿಸಿಕೊಳ್ಳಲು ಚರ್ಚೆ ಮಾಡದೇ ಶೇ ೧೫ ರಷ್ಟು ತೆರಿಗೆ ಹೆಚ್ಚಿಸುವ ನಿರ್ಣಯಕ್ಕೆ ಸರ್ವಾನುಮತದ ಅನುಮೋದನೆ ಸಿಕ್ಕಿತು ಬುಧವಾರ ಪಾಲಿಕೆಯಲ್ಲಿ ನಡೆದ ನಾಟಕೀಯ ಬೆಳವಣಿಗೆ ನೋಡಿದರೆ ಇದೊಂದು ಮಿಲಾಪ ಕುಸ್ತಿ ಅನ್ನೋದು ಸ್ಪಷ್ಟವಾಗಿತ್ತು