ಸೂಪರ್ ಸೀಡ್ ಲೆಕ್ಕಾಚಾರ ಬುಡಮೇಲು..ಮತ್ತೆ ಸರೀತಾ ಪಾಟೀಲರ ಕೈ ಮೇಲು.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸರಿತಾ ಪಾಟೀಲರ ಅಧಿಕಾರ ಇನ್ನೇನು ಮುಗಿಯಿತು. ಪಾಲಿಕೆ ಬರಖಾಸ್ತ ಆಯಿತು ಎಂದು ಜನ ಅಂದುಕೊಂಡಿದ್ದರು. ಆದರೆ ರಾಜ್ಯದಲ್ಲಿ ನರಸತ್ತ ಸರ್ಕಾರ ಇರುವುದರಿಂದ ಜನ ಅಂದುಕೊಂಡಂತೆ ಅಂತದ್ದೇನು ಆಗಲಿಲ್ಲ. ಮತ್ತೇ ಪಿನಿಕ್ಸ್ ಪಕ್ಷಿಯಂತೆ ಚೇತರಿಸಿಕೊಂಡ ಸರಿತಾ ಪಾಟೀಲ ಶುಕ್ರವಾರ ಸಭೆ ನಡೆಸಿ ಅಜೇಂಡಾಗೆ ಅಸ್ತು ಎಂದರು

ಪಾಲಿಕೆ ವಿರುದ್ಧದ ಸರ್ಕಾರದ ಅ್ಯಕ್ಷನ್ ಅಂಡರ್ ಪಾಸ್ ಆದರೆ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾ ಮಾತ್ರ  ಬುಲೇಟ್ ಟ್ರೇನ್ ತರಹ ಪಾಸ್ ಪಾಸ್ ಆಯಿತು. ಪಾಲಿಕೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್ ಗಳ ನಿರ್ಮಾಣ. ಹಿಂಡಲಗಾ ಕೈದಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಹಾಪೌರರ ಕ್ರೀಡಾಕೂಟ ಸೇರಿದಂತೆ ಅನೇಕ ವಿಷಗಳಿಗೆ ಸದಸ್ಯರು ಅನುಮೋದನೆ ನೀಡಿದರು.

ಎಂದಿನಂತೆ ಸದಸ್ಯರು ನೀರು ಸರಬರಾಜು ಮಂಡಳಿಗೆಯ ಕಾರ್ಯವೈಕರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.  ಡಾ.ನಾಶಿಪುಡಿ ಅವರು ಈಸಲವೂ ಪ್ರಸನ್ ಮೂರ್ತಿ ವಿರುದ್ಧ ಪೈರಿಂಗ್ ಮಾಡಿದರು.

ಸಭೆಯಲ್ಲಿ ಹಿಂಡಲಗಾ ಕಾರಾಗೃಹಕ್ಕೆ ನೀರು ಪೂರೈಸುವ ಯೋಜನೆಗೆ ಅನುಮತಿ ನೀಡುವ ವಿಷಯ ಪ್ರಸ್ತಾಪವಾದಾಗ ಕೆಲ ಸದಸ್ಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ಇನ್ನು ಕೆಲವರು ಸಮ್ಮತಿಸಿದರು. ಉಳಿದವರು ಅವರಿಗೂ ನೀರು  ಕೊಡ್ರಿ  ಸ್ವಲ್ಪ ನಮ್ಮ ಕಡೆಯೂ  ನೋಡ್ರಿ ಅಂತ ದ್ವನಿಗೂಡಿಸಿದರು

.ಇಂದಿನ ಪಾಲಿಕೆ ಸಭೆಯಲ್ಲಿ ಕನ್ನಡದ ವೀರ ಪುತ್ರರು ಮಹಾ ಪೌರರ ವಿರುದ್ಧ ಸಮರ ಸಾರಿ ಅವರ ರಾಜೀನಾಮೆಗೆ ಪಟ್ಟು ಹಿಡಿಯಬಹುದೆಂಬ ಎಲ್ಲರ ನಿರೀಕ್ಷೆ ಇತ್ತು ಅದು ಕೂಡ ಇಂದಿನ ಸಭೆಯಲ್ಲಿ ಹುಸಿಯಾಯಿತು

 

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *