ಬೆಳಗಾವಿ-ಬೆಳಗಾವಿಗೆ ಬರುವ ಜನ ಬೆಳಗಾವಿ ತಗ್ಗಿನಲ್ಲಿದೆಯೋ ಅಥವಾ ತಗ್ಗಿನಲ್ಲಿ ಬೆಳಗಾವಿ ಇದೆಯೋ ಅಂತ ಕೇಳ್ತಾರೆ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಮಣ್ಣು ಹಾಕಿದ್ರ ರಾಡಿ ಆಗತೈತಿ ಖಡೀ ಹಾಕಿದ್ರ ಜಿಗಿತೈತಿ ಅದಕ್ಕ ಮಣ್ಣು ಖಡೀ ಹಾಕದೇ ತಗ್ಗುಗಳಲ್ಲಿ ಫೇವರ್ ಹಾಕಿ ಅಂತ ನಗರ ಸೇವಕಿ ಸರಳಾ ಹೇರೇಕರ ಅವರು ಪಾಲಿಕೆ ಸಭೆಯಲ್ಲಿ ಧ್ವನಿ ಎತ್ತಿದರು
ನಗರಸೇವಕಿ ಪುಷ್ಪಾ ಪರ್ವತರಾವ ಅವರು ಮಾತನಾಡಿ ಗಣೇಶ ಹಬ್ಬ ಹತ್ತಿರ ಬಂದಿದೆ ರಸ್ತೆಯಲ್ಲಿ ಬಿದ್ದಿರುವ ತಗ್ಗು ತುಂಬಿ ಕಳೆದವರ್ಷ ತಗ್ಗುಗಳಲ್ಲಿ ತುಂಬಿದ ಮಣ್ಣು ಒಂದು ದಿನ ತಡೆಯಲಿಲ್ಲ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಒತ್ತಾಯ ಮಾಡಿದಾಗ ಸರಳಾ ಹೇರೇಕರ ಸೇರಿದಂತೆ ಇನ್ನಿತರರು ಧ್ವನಿಗೂಡಿಸಿದರು
ಇದಕ್ಕೆ ಸ್ಪಂದಿಸಿದ ಪಾಲಿಕೆ ಅಭಿಯಂತರ ಆರ್ ಎಸ್ ನಾಯಿಕ ನಗರದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಫೆವರ್ ಇಲ್ಲದಿದ್ದರೆ ಕಾಂಕ್ರೀಟ್ ಹಾಕುವದಾಗಿ ತಗ್ಗಿನ ವಿಷಯವನ್ನು ಮುಚ್ಚಿದರು
ಇದಾದ ಬಳಿಕ ಪಾಲಿಕೆಯಲ್ಲಿ ಕಾನೂನು ಸಲಹೆಗಾರರನ್ನು ಮುಂದುವರೆಸುವ ವಿಷಯ ಪ್ರಸ್ತಾಪವಾದಾಗ ನಗರ ಸೇವಕ ಮಾಸೇಕರ ಹಲವಾರು ಪ್ರಕರಣಗಳು ಮಂದಗತಿಯಲ್ಲಿ ಸಾಗಿವೆ ಅನೇಕ ಕೇಸ್ ಗಳು ಪೆಂಡಿಂಗ್ ಬಿದ್ದಿವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಮಾಡಿದರು
ಇದಕ್ಕೆ ಅಕ್ಷೇಪ ವ್ಯೆಕ್ತಪಡಿಸಿದ ನಗರ ಸೇವಕಿ ಸರಳಾ ಹೇರೇಕರ ಏ..ಹಿರೋ ನೀನೂ ವಕೀಲ ಇದ್ದೀಯಾ,ನೀನು ಎಲ್ಲ ಕೇಸ್ ಗಳನ್ನು ಗೆದ್ದಿದಿಯಾ ಪಾಲಿಕೆಯ ವಕೀಲ ಬಂದು ಒಂದು ವರ್ಷ ಆಗಿಲ್ಲ ಅವರಿಗೆ ಕೇಸ್ ಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕೊಡಿ ಪದೇ ಪದೇ ಕಾನೂನು ಸಲಹೆಗಾರರನ್ನು ಬದಲಾಯಿಸುವದು ಇದೇನು ಭಾಝಿ ಪಾಲಾ ಅಲ್ಲ ಎಂದು ಸರಳಾ ಹೇರೇಕರ ಮಾಸೇಕರ ಅವರನ್ನು ತರಾಟೆಗೆ ತೆಗೆದುಕೊಂಡರು
ಮದ್ಯ ಪ್ರವೇಶಿಸಿದ ಕಿರಣ ಸೈನಾಯಿಕ ಸರಳಾ ಹೇರೇಕರ ಅವರ ಮಾತುಗಳಿಗೆ ಅಕ್ಷೇಪ ವ್ಯೆಕ್ತಪಡಿಸಿದಾಗ ಸಭೆಯಲ್ಲಿ ಕಾಕಾ..ಮಾಮಾ ಮಾತನಾಡಬಹುದು ನಾನೇಕೆ ಮಾತನಾಡಬಾರದು ಎಂದು ಸರಳಾ ಹೇರೇಕರ ಕಿರಣ ಸೈನಾಯಿಕ ಅವರನ್ನು ತರಾಟೆಗೆ ತಡಗೆದುಕೊಂಡರು
ಮೇಯರ್ ಸಂಜೋತಾ ಬಾಂಧೇಕರ ಹತ್ತು ನಿಮಿಷ ಮಾತನಾಡಲು ಸರಳಾ ಹೇರೇಕರ ಅವರಿಗೆ ಅವಕಾಶ ನೀಡಿದರು
ಇಂದು ನಡೆದ ಪಾಲಿಕೆ ಸಭೆಯಲ್ಲಿ ಸರಳಾ ಎಲ್ಲರನ್ನು ಸರಳವಾಗಿ ತರಾಟೆಗೆ ತೆಗೆದುಕೊಂಡರು
ಪಾಲಿಕೆ ಸಭೆಯಲ್ಲಿ ಆರ್ ಎಸ್ ನಾಯಿಕ ಬಿಲ್ಡೀಂಗ್ ಬೈಲಾ ಬಗ್ಗೆ ನಗರ ಸೇವಕರಿಗೆ ಸಮಗ್ರ ಮಾಹಿತಿ ನೀಡಿದರು