ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ ನಂತರವು ಅವರು ಮುಂಬೈ ಮೇಯರ್‍ಗೆ ಭೇಟಿಯಾಗಿರುವ ವಿಷಯ ತಮಗೂ ಹಾಗೂ ಮುಖ್ಯಮಂತ್ರಿಗಳಿಗೂ ನೋವನ್ನುಂಟು ಮಾಡಿದೆ ಈ ಬಗ್ಗೆ ಬುಧವಾರ ಸಂಜೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಅವರ ವಿರದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆನ್ನುವದರ ಬಗ್ಗೆ ತಿರ್ಮಾಣ ಕೈಗೊಳ್ಳಲಾಗುವುದೆಂದು ನಗರಾಭಿವೃದ್ದಿ ಸಚಿವ ರೋಷನ ಬೇಗ ತಿಳಿಸಿದ್ದಾರೆ.
ಸುವಣ್ ವಿಧಾನ ಸೌಧದಲ್ಲಿ ಅವರನ್ನು ಭೇಟಿಯಾದ ಬೆಳಗಾವಿ ಪಾಲಿಕೆಯ ನಗರ ಸೇವಕರ ಅಭಿಪ್ರಯ ಆಲಿಸಿದ ಬಳಿಕ ಮಾತನಾಡಿದ ಅವರು ಬೆಳಗಾವಿ ಮೇಯರ್ ನಡೆ ತೀವ್ರ ಬೇಸರ ತಂದಿದೆ ಈ ಕುರಿತು ಬೆಳಿಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೆನೆ ಅವರು ಈ ಕುರಿತು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ ನಗರ ಸೇವಕರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೆನೆ ಎಂದು ಸಚಿವರು ತಿಳಿಸಿದರು.
ಬೆಳಗಾವಿ ಜಿಲ್ಲೆ ಹಾಗೂ ನಗರ ಎಂದೆಂದಿಗೂ ಕನ್ನಡದ ನೆಲವಾಗಿದ್ದು ಕನ್ನಡ ನೆಲ ಜಲ ಭಾಷೆಗೆ ಧಕ್ಕೆ ಬಂದಾಗ ಅದನ್ನು ಸಹಿಸಲು ಸಾಧ್ಯವಿಲ್ಲ ಜೈ ಕರ್ನಾಟಕ ಎಂದು ಮಾತು ಮುಗಿಸಿದರು
ಇದಕ್ಕು ಮೊದಲು ಪಾಲಿಕೆ ಸದಸ್ಯ ದೀಪಕ ಜಮಖಂಡಿ ಮಾತನಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದರೆ ಬೆಳಗಾವಿಯ ಜನರಿಗೆ ಅನ್ಯಾಯವಾಗುತ್ತದೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಊರ್ದು, ಹಾಗು ಮರಾಠಿ ಭಾóಷಿಕ ನಗರ ಸೇವಕರು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ ನಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ ಎಲ್ಲರಕ್ಕಿಂತ ಹೆಚ್ಚಾಗಿ ಟ್ಯಾಕ್ಸ ವಸೂಲಿ ಮಾಡಿದ್ದೇವೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪಾಲಿಕೆ ಆಸ್ತಿಯನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದ್ದೇವೆ ದಯವಿಟ್ಟು ಪಾಲಿಕೆಯನ್ನು ವಜಾ ಮಾಡಿ ತಪ್ಪು ಮಾಡದೇ ಇರುವ ನಗರ ಸೇವಕರಿಗೆ ಶಿಕಲ್ಷೆ ಕೊಡಬೇಡಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು ಇದೇ ಧಾಟಿಯಲ್ಲಿ ರಮೇಶ ಸೊಂಟಕ್ಕಿ ಹಾಗು ಸರಳಾ ಹೇರೆಕರ ಮಾತನಾಡಿದರು
ಸಭೆಯಲ್ಲಿ ನಗರ ಸೇವಕರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಸಚಿವರು ಬೆಳಗಾವಿ ಮೇಯರ್ ನಡೆಯ ಬಗ್ಗೆ ತೀವ್ರ ಭೇಸರ ವ್ಯಕ್ತ ಪಡಿಸಿದರು ಬುಧವಾರ ಸಂಜೆ ಸಚಿವ ಸಂಪೂಟದ ಸಭೆ ನಡೆಯಲಿದ್ದು ಸಭೆಯಲ್ಲಿ ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಕುರಿತು ತೀರ್ಮಾಣ ಕೈಗೊಳ್ಳುವ ಮೂನ್ಸೂಚನೆ ನೀಡಿದರು
