ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ದಿನಾಂಕ ೧೮-೪-೨೦೨೦ ರಂದು ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು..
* ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣದ ವ್ಯಕ್ತಿ ಗುಣಮುಖರಾಗಿದ್ದು, ಇದೀಗ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿರುತ್ತದೆ.
* ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಪಿ-೧೨೬ ಈಗ ಗುಣಮುಖರಾಗಿದ್ದು, ಮರು ಪರೀಕ್ಷೆ ಬಳಿಕವೂ ವರದಿ ನೆಗೆಟಿವ್ ಬಂದಿರುತ್ತದೆ.
* ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ ತಲಾ 16 ಪ್ರಕರಣಗಳು ವರದಿಯಾಗಿವೆ.
* ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
* ಆರಂಭದಲ್ಲಿ ಅಸಹಕಾರ ನೀಡಿದ ಜನರು ಇದೀಗ ಪರೀಕ್ಷೆಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದ ನಿಯಂತ್ರಣ ಸಾಧ್ಯ.
* ನಿಷೇಧಿತ ಪ್ರದೇಶಗಳಲ್ಲಿ ದಿನಸಿ, ತರಕಾರಿಗಳನ್ನು ಮನೆ ಮನೆಗೆ ಒದಗಿಸಲಾಗುತ್ತಿದೆ. ಸಣ್ಣಪುಟ್ಟ ತೊಂದರೆಗಳಾದರೂ ಸಹಕರಿಸಬೇಕು.
* ಪ್ರಯೋಗಾಲಯಕ್ಕೆ ಅನುಮತಿ ದೊರೆತಿದೆ. ಬೆಳಿಗ್ಗೆ ಪ್ರಯೋಗಾಲಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಬುಧವಾರದಿಂದ ಮಾದರಿಗಳ ಪರೀಕ್ಷೆ ಆರಂಭಗೊಳ್ಳಲಿದೆ.
* ಪ್ರಯೋಗಾಲಯ ಆರಂಭ ಕ್ಕೆ ಶ್ರಮಿಸಿದ ಸಚಿವ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
* ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಜಿಲ್ಲೆಗೆ ಒದಗಿಸಲು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು.
* ಗ್ರಾಮೀಣ ಪ್ರದೇಶದಲ್ಲಿ ಇರುವ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು.
* ಕೋವಿಡ್-೧೯ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿದರೆ ಕೈಗಾರಿಕೆ ಆರಂಭಿಸಲು ಅನುಮತಿ ನೀಡಲಾಗುವುದು.
* ಎಲ್ಲ ಧರ್ಮದವರು ಸಾಮೂಹಿಕ ಪ್ರಾರ್ಥನೆಗಳನ್ನು ಕೈಬಿಡುವ ಮೂಲಕ ಕೋವಿಡ್-೧೯ ನಿಯಂತ್ರಣಕ್ಕೆ ಸಹಕರಿಸಬೇಕು.
* ಬೆಳಗಾವಿಗೆ ೩೦೦೦ ರ್ಯಾಪಿಡ್ ಟೆಸ್ಟಿಂಗ್ ಕಿಟ್ ತಕ್ಷಣ ಒದಗಿಸುವಂತೆ ಕೋರಲಾಗಿದೆ.
* ವೈದ್ಯರು ಕ್ಲಿನಿಕ್ ಆರಂಭಿಸಲು ಮುಂದಾಗಬೇಕು.
* ಮಾಧ್ಯಮ ಮತ್ತು ಪೊಲಿಸ್ ಸೇವೆಯನ್ನು ಕೂಡ ಕರೊನಾ ವಾರಿಯರ್ಸ್ ಅಂತ ಪರಿಗಣಿಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯ ಭರವಸೆ.
* ಲಾಕ್ ಡೌನ್ ಅವಧಿಯಲ್ಲಿ ಮದ್ಯ ಮಾರಾಟ ಆರಂಭಿಸುವುದು ಸೂಕ್ತವಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ.
* ಅಪಘಾತದಲ್ಲಿ ಮೃತಪಟ್ಟ ಪಿ.ಎಸ್. ಐ. ಗಣಾಚಾರಿ ಅವರ ಮಕ್ಕಳಿಗೆ ಅನುಕಂಪ ಆಧಾರದ ಮೇಲೆ ನೌಕರಿ ಮತ್ತಿತರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.