ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಒಟ್ಟು ಹತ್ತು ಜನರ ಕೊರೋನಾ ಶಂಕಿತರ ಗಂಟಲು ದ್ರವವನ್ನು ಕಲೆಕ್ಟ್ ಮಾಡಲಾಗಿದ್ದು ಈಗಾಗಲೇ ಐವರ ರಿಪೋರ್ಟ್ ನೆಗೆಟಿವ್ ಬಂದಿದ್ದು ಇನ್ನೂ ಐವರ ಸ್ಯಾಂಪಲ್ ಗಳನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ.
ಬೆಳಗಾವಿ ಜಿಲ್ಲಾಡಳಿತ ಇಂದು ಸಂಜೆ ಹೆಲ್ತ ಬುಲೆಟಿನ್ ಬಿಡುಗಡೆ ಮಾಡಿದ್ದು,ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಲೇಟೆಸ್ಟ್ ಬುಲಿಟೀನ್ ನಲ್ಲಿ ಈ ವಿಷಯವನ್ನು ತಿಳಿಸಿದೆ .
ಬೆಳಗಾವಿ ಜಿಲ್ಲೆಯಲ್ಲಿ ಒಟ್ಡು ಹತ್ತು ಜನ ಶಂಕಿತರ ಗಂಟಲು ದ್ರವ ಕಲೆಕ್ಟ್ ಮಾಡಲಾಗಿತ್ತು ಒಟ್ಟು ಹತ್ತು ಜನರಲ್ಲಿ ಐವರ ರಿಪೋರ್ಟ್ ನೆಗೆಟೀವ್ ಬಂದಿದೆ.ಇನ್ನೂ ಐವರ ಶಂಕಿತರ ರಿಪೋರ್ಟ್ ಬರುವದು ಬಾಕಿ ಇದೆ .
ಇಂದು ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್ ಆಗಿತ್ತು ,ಜಿಲ್ಲಾಡಳಿತ ದಿನಸಿ ವಸ್ತುಗಳನ್ನು ಖರೀಧಿ ಮಾಡುವವರಿಗೆ ಅವಕಾಶ ಮಾಡಿ ಕೊಟ್ಟಿತ್ತು,ನಾಳೆಯೂ ಜಿಲ್ಲೆಯ ಎಲ್ಲ ಕಿರಾಣಿ ಅಂಗಡಿಗಳು ಬಾಗಿಲು ತೆರೆಯಲಿದ್ದು, ಸಾರ್ವಜನಿಕರು,ಗದ್ದಲ ಮಾಡದೇ ಜಿಲ್ಲಾಡಳಿತ ಕಿರಾಣಿ ಅಂಗಡಿಗಳ ಎದುರು ಮಾಡಿರುವ ಮಾರ್ಕಿಂಗ್ ಚೌಕಟ್ಟಿನಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀಧಿ ಮಾಡಬಹುದು.
ದಿನಸಿ ಅಂಗಡಿ ಮಾಲೀಕರು ನಾಳೆ ರವಿವಾರ ಪೇಠೆಯಲ್ಲಿ ಒಬ್ಬೊಬ್ಬರಾಗಿ ದಿನಸಿ ವಸ್ತುಗಳನ್ನು ಖರೀಧಿ ಮಾಡಬಹುದು.