ಬೆಳಗಾವಿ- ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಸೊಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ. ಆದರೇ ಬೆಳಗಾವಿಗೆ ಬಂದಿರುವ ಇಂಡಿನೇಷಿಯಾದ ತಬಲಿಗ್ ಜಮಾತ್ ನ 10 ಜನ ಧರ್ಮ ಪ್ರಚಾರರನ್ನು ಮುನ್ನೆಚ್ಚೆರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ.
ಇಂಡೋನೇಶಿಯಾದಿಂದ ದೆಹಲಿಗೆ ಬಂದು ದೆಹಲಿಯ ಬಂಗ್ಲೆವಾಲಿ ಮಸೀದಿಯ ನಿಜಾಮುದ್ದಿನ್ ಮರಕಜ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಂಗ್ಲೆವಾಲಿ ಮಸೀದಿಯ ಧಾರ್ಮಿಕ ಮುಖಂಡರ ಆದೇಶದ ಮೇರೆಗೆ ಬೆಂಗಳೂರಿಗೆ ಬಂದು ಬೆಂಗಳೂರಿನ ಧಾರ್ಮಿಕ ಮುಖಂಡರ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿ ಧರ್ಮಪ್ರಚಾರ ಕೈಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಣೆ ಸಂದರ್ಭದಲ್ಲಿ ಇವರೆಲ್ಲರೂ ಬೆಳಗಾವಿಯಲ್ಲಿ ಇದ್ದರು. ನಂತರ ಅವರನ್ನು ಮಸೀದಿಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸಂಬಂಧಿಸಿದ ಯಾವುದೇ ಲಕ್ಷಣ ಇವರಲ್ಲಿ ಕಂಡು ಬಂದಿಲ್ಲ. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಬೆಳಗಾವಿಯಲ್ಲಿ ಇಂಡೋನೇಶಿಯಾ ಮೂಲದ 10 ಜನ ಧರ್ಮ ಪ್ರಚಾರಕರ ಪಾಸ್ ಪೋರ್ಟ್ ಗಳನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ದೆಹಲಿಯ ನಿಜಾಮುದ್ದೀನ್ ಬಂಗ್ಲೆ ವಾಲೆ ಮಸೀದಿಯ ಸಭೆಯಲ್ಲಿ ಬೆಳಗಾವಿಯ ಇನ್ನೂ ಅನೇಕರು ಭಾಗಿ ಆಗಿರೋ ಸಾಧ್ಯತೆ ಇದೆ. ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ವಿವಿಧ ತಾಲೂಕಿನ ಜನ ತಬಲಿಗ್ ಜಮಾತ್ ಪರಿಪಾಲಕರು 10 ದಿನ ಸೇವೆ ಮಾಡಲು ದೆಹಲಿಗೆ ಹೋದುವ ಸಂಪ್ರದಾಯ ಜಮಾತ್ ನಲ್ಲಿ ಇದೆ. ಹೀಗಾಗಿ ದೇಶದ ಎಲ್ಲಾ ಭಾಗಗಳಿಂದ ಗುಂಪು ಕಟ್ಟಿಕೊಂಡು ಸೇವೆ ಮಾಡಲು ದೆಹಲಿಗೆ ಹೋಗುತ್ತಾರೆ.
ಇಂಡೋನೇಶೀಯಾದಿಂದ ಬಂದಿರೋ ಧರ್ಮ ಪ್ರಚಾರಕು ಹಾಗೂ ಸಭೆಯಲ್ಲಿ ಪಾಲ್ಗೊಂಡಿದ್ದ ಸೇವಕರ ಕುರಿತು ಮಾಹಿತಿಯನ್ನು ಬೆಳಗಾವಿ ಜಿಲ್ಲಾಢಳಿತ ಕಲೆ ಹಾಕುತ್ತಿದೆ.