ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆ ವಿಚಾರವಾಗಿ ಸೋಂಕು ಪೀಡಿತ ವ್ಯಕ್ತಿ ಸಂಖ್ಯೆ 126ರ ಟ್ರಾವೆಲ್ ಹಿಸ್ಟ್ರಿ ಹೀಗಿದೆ
ಮಾರ್ಚ್ 4 ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಆಗಮನ. ನಂತರ ಎಂದಿನಂತೆ ಕಸಾಯಿ ಖಾನೆ ಕೆಲಸದಲ್ಲಿ ಭಾಗಿ. ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದರ ಹಿನ್ನಲೆಯಲ್ಲಿ ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರಿಗೂ ಜಿಲ್ಲಾಡಳಿತ ತೀವ್ರ ಹುಡುಕಾಟ ನಡೆಸಿದೆ. ಸೋಂಕಿತನ ಜತೆಗೆ ನಾಲ್ಕು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ.
ಬೆಳಗಾವಿಯ ಮೂರು ಜನರ ಜತೆಗೆ 37 ಜನ ಪ್ರಾಥಮಿಕ ಸಂಪರ್ಕ ಎಂದು ಪರಿಗಣನೆ ಮಾಡಿರುವ ಜಿಲ್ಲಾಡಳಿತ ಎಲ್ಲಾ 37 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ದೃಢ ವಿಚಾರ
ಪೇಷಂಟ್ ನಂಬರ್ 128 – 20 ವರ್ಷದ ಯುವಕನ ಟ್ರಾವೆಲ್ ಹಿಸ್ಟರಿ ಕಲೆ ಹಶಕಲಾಗಿದೆ ಬೆಳಗಾವಿ ತಾಲೂಕಿನ ಗ್ರಾಮವೊಂದರ ನಿವಾಸಿ ಪೇಷಂಟ್ ನಂಬರ್ 128 ಫೆಬ್ರವರಿ 12ರಂದು ಬೆಳಗಾವಿಯಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಸಂಪರ್ಕ ಕ್ರಾಂತಿ ರೈಲಿನಲ್ಲಿ ದೆಹಲಿಗೆ ತೆರಳಿದ್ದ ಪೇಷಂಟ್ ನಂಬರ್ 128 ಫೆಬ್ರವರಿ 13ರ ಸಂಜೆ 7ಕ್ಕೆ ದೆಹಲಿ ಹಜರತ್ ನಿಜಾಮುದ್ದಿನ್ ರೇಲ್ವೆ ನಿಲ್ದಾಣ ತಲುಪಿದ್ದ
ದೆಹಲಿಯಿಂದ ಖಾಸಗಿ ವಾಹನದಲ್ಲಿ ಉತ್ತರಪ್ರದೇಶದ ಚೇಕಡಾ ಗ್ರಾಮಕ್ಕೆ ಪ್ರಯಾಣ ಮಾಡಿದ ಈತ 36 ದಿನಗಳ ಕಾಲ ಚೇಕಡಾ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದ ಮಾರ್ಚ್ 21ರಂದು ಉತ್ತರಪ್ರದೇಶದಿಂದ ದೆಹಲಿಗೆ ವಾಪಸಾಗಿದ್ದ. ಮಾರ್ಚ್ 21ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ದೆಹಲಿಯಿಂದ ಬೆಳಗಾವಿಗೆ ಪ್ರಯಾಣ
ಮಾರ್ಚ್ 22ರಂದು ಬೆಳಗಾವಿಗೆ ಆಗಮಿಸಿದ್ದ ಪೇಷಂಟ್ ನಂಬರ್ 128 ಬಳಿಕ ಟಾಟಾ ಏಸ್ ವಾಹನದಲ್ಲಿ ಸ್ವಗ್ರಾಮಕ್ಕೆ ಬಂದಿದ್ದ
ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಬಳಿಕ ಗ್ರಾಮದ ವೈದ್ಯರೊಬ್ಬರ ಬಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದ
ಪೇಷಂಟ್ ನಂಬರ್ 128 ಜೊತೆ ವಾಸವಿದ್ದ ತಂದೆ ತಾಯಿ ಸೇರಿ 9 ಜನರಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆ. ಬೆಳಗಾವಿ ನಗರ ಸೇರಿದಂತೆ ಮೂರು ಕಡೆಗಳಲ್ಲಿ ಪ್ರದೇಶ ನಿರ್ಬಂಧಾಜ್ಞೆ ಜಾರಿ ಮಾಡಲಾಗಿದೆ. ಕರೋನ ಪಾಸಿಟಿವ್ ಪ್ರಕರಣ ಕಂಡು ಬಂದ ಬೆಳಗಾವಿ ಹಿರೇಬಾಗೇವಾಡಿ ಗ್ರಾಮ. ಮತ್ತು ಬೆಳಗುಂದಿ ಗ್ರಾಮದ ಮೂರು ಕಿಮೀ ವ್ಯಾಪ್ತಿಯಲ್ಲಿ ನಿರ್ಭಂದಾಜ್ಞೆ ಜಾರಿ.
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿಯ ಮೂರು ಕಿಮೀ ವ್ಯಾಪ್ತಿಯಲ್ಲಿ ಪ್ರದೇಶ ನಿರ್ಭಂದಾಜ್ಞೆ ಜಾರಿ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ಅವರು ಆದೇಶ ಹೊರಡಿಸಿದ್ದಾರೆ.
ಮೂರು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಒಳ ಪ್ರವೇಶ ಹಾಗೂ ಹೊರ ಹೋಗುವುದನ್ನ ನಿಷೇಧ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸಲು ಜಿಲ್ಲಾಡಳಿತ ಸೂಚಿಸಿದೆ. ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಭಾರತೀಯ ಕಲಂ 188 ರ ಪ್ರಕಾರ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.