ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸ್ಥಿತಿಗಳ ಬಗ್ಗೆ ನಿನ್ನೆ ಸಂಜೆ ಆರೋಗ್ಯ ಇಲಾಖೆ ಹೆಲ್ತ ಬುಲಿಟೀನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು 850 ಜನರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದೆ.
850 ಜನರಲ್ಲಿ 229 ಜನರನ್ನು 14 ದಿನಗಳ ವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.38 ಜನರನ್ನು ಆಸ್ಪತ್ರೆಯಲ್ಲಿ ಐಸೀಲೇಟ್ ಮಾಡಲಾಗಿದೆ.
ಈ ವರೆಗೆ ಒಟ್ಟು 79 ಕೊರೋನಾ ಶಂಕಿತರ ಗಂಟಲು ದ್ರವ ಸಂಗ್ರಹಿಸಲಾಗಿತ್ತು ಅದರಲ್ಲಿ 69 ಜನರ ರಿಪೋರ್ಟ್ ನೆಗೆಟೀವ್ ಬಂದಿದೆ 7 ಜನರ ರಿಪೋರ್ಟ್ ಪಾಸಿಟೀವ್ ಬಂದಿದೆ ಇನ್ನೂ ಮೂರು ಜನರ ರಿಪೋರ್ಟ್ ಬರುವದು ಬಾಕಿ ಇದೆ,ಈ ಮೂರು ಜನರ ರಿಪೋರ್ಟ್ ಇಂದು ಸಂಜೆ ಅಥವಾ ನಾಳೆ ಬರುವ ನಿರೀಕ್ಷೆ ಇದೆ.
ರಾಯಬಾಗ ಕುಡಚಿಯ ನಾಲ್ಕು ಜನರಿಗೆ ಪಾಸಿಟೀವ್ ರಿಪೋರ್ಟ್ ಬಂದಿರುವ ಹಿನ್ನಲೆಯಲ್ಲಿ ರಾಯಬಾಗ ಕುಡಚಿಯನ್ನು ಬಫರ್ ಝೋನ್ ಆಗಿ ಪರಿವರ್ತಿಸಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.