ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1461ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು ಜಿಲ್ಲೆಯ ಹತ್ತು ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.144 ಜನರ ರಿಪೋರ್ಟ ನೆಗೆಟೀವ್ ಬಂದಿದೆ.
ಇಂದು ಗುರುವಾರ ಒಂದೇ ದಿನ ಮೂರು ಜನರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 10 ಕ್ಕೇರಿದೆ ಬೆಳಗಾವಿ ಜಿಲ್ಲೆಯ ಒಟ್ಟು 47 ಕೊರೋನಾ ಶಂಕಿತರ ರಿಪೋರ್ಟ್ ಬರಬೇಕಾಗಿದೆ.
ಹಿರೇಬಾಗೇವಾಡಿಯಲ್ಲಿ ನಾಲ್ಕು ಜನ,ಬೆಳಗುಂದಿ ಒಂದು,ಬೆಳಗಾವಿ ನಗರ ಕ್ಯಾಂಪ್ (ಕಸಾಯಿ ಗಲ್ಲಿ) ಪ್ರದೇಶ ಒಂದು ರಾಯಬಾಗ ಕುಡಚಿಯಲ್ಲಿ ನಾಲ್ಕು ಸೊಂಕಿತರು ಜಿಲ್ಲೆಯಲ್ಲಿ ಹತ್ತು ಜನರಿಗೆ ಕೊರೋನಾ ಸೊಂಕು ಪತ್ತೆಯಾಗಿದೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ 12 ಜನರಿಗೆ ಐಸೋಲೇಟ್ ಮಾಡಲಾಗಿದೆ,317 ಜನರು 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ.
,559 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣ ಗೊಳಿಸಿದ್ದು 573 ಜನರು14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದರೂ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.ಜಿಲ್ಲಾಡಳಿತ ಏನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲ ಕ್ರಮಗಳನ್ನು ಕೈಗೊಂಡಿದೆ,ಪೋಲೀಸರ ಹಲವಾರು ಪ್ರಯತ್ನಗಳ ಬಳಿಕವೂ ಜನರ ಓಡಾಟ ನಿಂತಿಲ್ಲ,ಗಲ್ಲಿಯ ಪಂಚರು ತಮ್ಮ ತಮ್ಮ ಬಡಾವಣೆಗಳಲ್ಲಿ ಜನ ಹೊರಗೆ ಬಾರದಂತೆ ಕಟ್ಟು ನಿಟ್ಟಿನ ನಿಗಾ ವಹಿಸಿ ಸಾಮಾಜಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಕೊರೋನಾ ಸೊಂಕು ಸಾಮಾಜಿಕವಾಗಿ ಹರಡದಂತೆ ತಡೆಯಬಹುದಾಗಿದೆ.
ಎಲ್ಲರೂ ಜಾಗೃತರಾಗಿರಿ..ಮನೆ ಬಿಟ್ಡು ಹೊರಗೆ ಬರಬೇಡಿ….ನಿಮ್ಮ ಜೀವ ನಿಮ್ಮ ಕೈಯಲ್ಲಿ