ಬೆಳಗಾವಿ- ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಸಿರಿಯಸ್ ಆಗುತ್ತಾ ಹೊರಟಿದೆ,ಸೊಂಕಿತರ ,18 ಜನ ಸೊಂಕಿತರ ಆರೋಗ್ಯ ಸ್ಥಿರವಾಗಿದ್ದರೂ ಈ ಮಹಾಮಾರಿ ವೈರಸ್ ಜಿಲ್ಲೆಯಲ್ಲಿ ಒಂದು ಬಲಿ ಪಡೆದಿದೆ.
ಸೊಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ದಿನನಿತ್ಯ ಕ್ವಾರಂಟೈನ್ ಮಾಡುವ ಕಾರ್ಯ ಹಗಲು ರಾತ್ರಿ ನಡೆದಿದೆ.ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ,
ಪ್ರತಿದಿನ ಹಲವಾರು ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ 178 ಜನರ ರಿಪೋರ್ಟ್ ಬರುವದು ಬಾಕಿ ಇದೆ.
ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ,18 ಜನ ಕೊರೋನಾ ಸೊಂಕಿತರಿದ್ದಾರೆ,ಒಬ್ಬ ವೃದ್ದೆ ಸಾವನ್ನೊಪ್ಪಿದ್ದಾಳೆ, ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ನರ್ತನ ಮುಂದುವರೆದಿದೆ, ಕೇಂದ್ರ ಸರ್ಕಾರ ಗುರುತಿಸಿರುವ 170 ಹಾಟ್ ಸ್ಪಾಟಗಳಲ್ಲಿ ಬೆಳಗಾವಿ ಜಿಲ್ಲೆಯೂ ಸೇರಿಕೊಂಡಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಈ ಮಹಾಮಾರಿ ಕೊರೋನಾ ಚೈನ್ ಮುರಿಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ.
ಲಾಕ್ ಡೌನ್ ಇನ್ನಷ್ಟು ಬಿಗಿಯಾಗಬೇಕಾದರೆ ಪೋಲೀಸರು ಲಾಠಿ ಹೊರ ತೆಗೆಯಬೇಕು.ಬೈಕ್ ಸವಾರರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಬೇಕು.ಹೀಗೆ ಹಲವಾರು ರೀತಿಯ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಲೇ ಬೇಕು.
ಇಂದು ಮದ್ಯಾಹ್ನ ಹನ್ನೆರಡು ಘಂಟೆಗೆ ಬೆಳಗಿನ ಹೆಲ್ತ ಬುಲಿಟೀನ್ ಬಿಡುಗಡೆಯಾಗುತ್ತದೆ, ಬೆಳಗಾವಿ ಜಿಲ್ಲೆಯ 178 ಶಂಕಿತರ ರಿಪೋರ್ಟ್ ಪೈಕಿ ಎಷ್ಟು ಜನರ ರುಪೋರ್ಟ್ ಹೊರಬೀಳುತ್ತದೆ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ .
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಜನ ಮನೆಯಿಂದ ಹೊರಗೆ ಬಾರದಂತೆ ಪೋಲೀಸರು ನೋಡಿಕೊಳ್ಳುತ್ತಿದ್ದಾರೆ.
ಅದರಂತೆ ಬೆಳಗಾವಿ ನಗರದ ಜನತೆ ಕೂಡಾ ಲಾಕ್ ಡೌನ್ ಪಾಲನೆ ಮಾಡುತ್ತಿದೆ .ಆದರೆ ಅಗತ್ಯ ವಸ್ತುಗಳ ಖರೀದಿಗಾಗಿ ದಿನನಿತ್ಯ ಬೆಳಗಾವಿಗೆ ಬರುವ ನೂರಾರು ಜನರಿಂದ ಪೋಲೀಸರಿಗೆ ಕಿರಿಕಿರಿಯಾಗುತ್ತಿರುವದು ಸತ್ಯ.