ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಂಕಟ ಮುಗಿಯುವ ಲಕ್ಷಣಗಳು ಕಾಣಿಸತೊಡಗಿವೆ. ಆದರೂ ಇನ್ನೂ 94 ಜನರ ರಿಪೋರ್ಟ್ ಬರುವದು ಬಾಕಿ ಇದೆ .ಈ 94 ಜನ ಶಂಕಿತರ ರಿಪೋರ್ಟ್ ನಾಳೆ ಅಥವಾ ನಾಡಿದ್ದು ಬರುವ ನಿರೀಕ್ಷೆ ಇದೆ..
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಒಟ್ಟು2135 ಜನರ ಮೇಲೆ ನಿಗಾ ಇಟ್ಟಿದೆ.ಈವರೆಗೆ ಜಿಲ್ಲಾಡಳಿತ834 ಜನರ. ಗಂಟಲು ದ್ರವ ಕಲೆಕ್ಟ್ ಮಾಡಿ ಪ್ರಯೋಗಾಲಯಕ್ಕೆ ಕಳಿಸಿತ್ತು ಇದರಲ್ಲಿ 698 ಜನರ ರಿಪೋರ್ಟ್ ನೆಗೆಟೀವ್ ಬಂದಿದೆ.42 ಜನರ ರಿಪೋರ್ಟ್ ಪಾಸೀಟೀವ್ ಬಂದಿದೆ ಹೀಗಾಗಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 42 ಇತ್ತು ಈ 42 ಜನರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ .ಒಬ್ಬರು ಗುಣಮುಖರಾಗಿ ಡಿಸ್ಚಾರ್ಜ ಆಗಿದ್ದಾರೆ.
ಒಟ್ಟು 51 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ.363 ಜನ 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.
708 ಜನ 14 ದಿನದ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ.1013 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ.
94 ಜನರ ರಿಪೋರ್ಟ್ ಬಂದ ಬಳಿಕ ಜಿಲ್ಲೆಯಲ್ಲಿ ಕೊರೊನಾ ಸೊಂಕು ಎಷ್ಟು ಪ್ರಮಾಣದಲ್ಲಿ ಹರಡುತ್ತಿದೆ ಅಥವಾ ನಿಯಂತ್ರಣಕ್ಕೆ ಬರುತ್ತಿದೆಯಾ ಎನ್ನುವ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.