ಬೆಳಗಾವಿ- ಲಗಾಮಿಲ್ಲದ ಕುದುರೆಯಂತೆ ಓಡಾಡುತ್ತಿದ್ದ ಮಹಾಮಾರಿ ಕೊರೋನಾ ಸೊಂಕಿಗೆ ಬೆಳಗಾವಿ ಜಿಲ್ಲೆಯ ಮೆಡಿಕಲ್ ವಾರಿಯರ್ಸ್ ಗಳು, ಲಗಾಮು ಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮರಣ ಪ್ರಮಾಣ,ಮತ್ತು ಸೊಂಕಿತರ ಅಂಕಿ ಅಂಶ ನೋಡಿ ಸಾರ್ವಜನಿಕರು ಹೆದರಬಾರದು ಎನ್ನುವ ಏಕೈಕ ಉದ್ದೇಶದಿಂದ ಬೆಳಗಾವಿ ಸುದ್ಧಿ ಡಾಟ್ ಕಾಮ್ ಇಷ್ಟು ದಿನ ಕೋವೀಡ್ ಗೆ ಸಮಂಧಿಸಿದ ಸುದ್ಧಿಗಳನ್ನು ಪ್ರಕಟಿಸಿರಲಿಲ್ಲ
ಬೆಳಗಾವಿ ಜಿಲ್ಲೆಯ ನಿನ್ನೆ ಗುರುವಾರದ ಹೆಲ್ತ್ ಬುಲೀಟೀನ್ ಗಮನಿಸಿದ್ರೆ,ಬೆಳಗಾವಿ ಜಿಲ್ಲೆಯ ನಮ್ಮ ಕೊರೋನಾ ವಾರಿಯರ್ಸ್ ಗಳು ಕೊರೋನಾ ಕಂಟ್ರೀಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಏನೇ ಇರಲಿ ,ಅನೇಕ ಸಾಧಕ ಭಾದಕಗಳ ನಡುವೆ ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು,ವಿಶೇಷವಾಗಿ ಭೀಮ್ಸ್ ಆಸ್ಪತ್ರೆಯ ನರ್ಸ್ ಗಳು,ತಾಲ್ಲೂಕಾ ಆಸ್ಪತ್ರೆಯ ಡಾಕ್ಟರ್ ಮತ್ತು ನರ್ಸ್ ಗಳು,ಮತ್ತು ಜಿಲ್ಲಾ ಆಸ್ಪತ್ರೆಯ ಕೆಲವು ವೈದ್ಯರುಗಳು ಜೀವದ ಹಂಗು ತೊರೆದು ಕೊರೋನಾ ಸೊಂಕಿನ ವಿರುದ್ಧ ಹೋರಾಟ ಮಾಡಿ ನೂರಾರು ಜೀವಗಳನ್ನು ಉಳಿಸಿದ್ದಾರೆ.ಈ ವಿಷಯದಲ್ಲಿ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರ ಜೊತೆ ಯಾವ ರೀತಿ ನಡೆದುಕೊಂಡಿವೆ ಅನ್ನೋದು ಸ್ವತಃ ಸಾರ್ವಜನಿಕರೇ ಅದನ್ನು ಅನುಭವಿಸಿದ್ದಾರೆ ,ಅವರ ಬಗ್ಗೆ ವಿಶ್ಲೇಷಣೆ ಸಾರ್ವಜನಿಕರೇ ಮಾಡಲಿ.
ನಿನ್ನೆಯ ಬುಲೀಟೀನ್ ಪ್ರಕಾರ,201 discharged 61 new cases no deaths Active cases 1024 ಬೆಳಗಾವಿ ಜಿಲ್ಲೆಯಲ್ಲಿ ಕೇವಲ 61 ಜನರಿಗೆ ಸೊಂಕು ತಗಲಿದೆ,ನಿನ್ನೆ ಒಂದೇ ದಿನ,201 ಜನ ಡಿಸ್ಚಾರ್ಜ್ ಆಗಿದ್ದಾರೆ,ನಿನ್ನೆ ಕೋವೀಡ್ ನಿಂದ ಯಾರೂ ಮರಣ ಹೊಂದಿಲ್ಲ,ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆಯ ಬುಲೀಟೀನ್ ಪ್ರಕಾರ 1024 ಜನ ಸೊಂಕಿತರು ಮಾತ್ರ ಸಕ್ರೀಯವಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರು ಗುಣಮುಖರಾಗುವ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ,ಸೊಂಕಿತರ ಸಂಖ್ಯೆಯೂ ಕಡಿಮೆ ಆಗುತ್ತಿದೆ,ಬೆಳಗಾವಿ ಜಿಲ್ಲೆಯನ್ನೇ ನಲುಗಿಸಿದ್ದ ಕೊರೋನಾ ಕಂಟ್ರೋಲ್ ಮಾಡುವಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮೆಡಿಕಲ್ ವಾರಿಯರ್ಸ್ ಗಳು ಯಶಸ್ವಿಯಾಗಿದ್ದಾರೆ.
ವಿಶೇಷ ಸಮ್ಮಾನ ಸಿಗಲಿ
ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜೀವದ ಹಂಗು ತೊರೆದು ಹೋರಾಡಿದ ವಾರಿಯರ್ಸ್ ಗಳನ್ನು ಬೆಳಗಾವಿ ಜಿಲ್ಲಾಡಳಿತ ರಾಜ್ಯೋತ್ಸವದ ಸಂಧರ್ಭದಲ್ಲಿ ಸತ್ಕರಿಸಿ ಗೌರವಿಸುವ ಕೆಲಸವನ್ನು ಮಾಡಬೇಕಾಗಿದೆ.