ಬೆಳಗಾವಿ: ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 3ರಿಂದ 5ರೆವೆರೆಗೆ ಬೆಳಗಾವಿಯಲ್ಲಿ
ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಂಘಟಕರಾದ ಅರುಣಕುಮಾರ ಹೇಳಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ 16 ತಂಡಗಳು ಸ್ಪರ್ಧಿಸಲಿದ್ದು, ಆರ್.ಪಿ.ಡಿ. ಕಾಲೇಜು ಮೈದಾನ ಮತ್ತು ಲಿಂಗರಾಜ ಕಾಲೇಜು ಮೈದಾನಗಳಲ್ಲಿ ಪಂದ್ಯಾವಳಿ ನಡೆಯಲಿವೆ. ಇದೇವೇಳೆ ಕರ್ನಾಟಕ ರಾಜ್ಯ ತಂಡಕ್ಕೂ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಪಂದ್ಯಾವಳಿ ನಡೆಸುವುದಕ್ಕಾಗಿ ನಮಗೆ 16 ಲಕ್ಷ ರೂ.ಗಿಂತ ಹೆಚ್ಚಿನ ಹಣದ ಅಗತ್ಯವಿದ್ದು, ಈವರೆಗೆ ಒಂದೂವರೆ ಲಕ್ಷ ರೂ. ಹಣ ಸಂಗ್ರಹವಾಗಿದೆ.
ಪ್ರಾಯೋಜಕರ ಕೊರತೆ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					